ಬೆಂಗಳೂರು: ಸ್ವಾಮೀಜಿಗಳು ಮತ್ತು ದೇವರ ದರ್ಶನ ನಮ್ಮಲ್ಲಿ ಭಕ್ತಿ ಭಾವಗಳನ್ನು ಉದ್ದೀಪನಗೊಳಿಸುತ್ತದೆ. ನಮ್ಮ ಬದುಕನ್ನು ಬದಲಾಯಿಸುವ ಶಕ್ತಿ ಅವರಲ್ಲಿದೆ.
ಇಂತಹ ದೇವರು ಮತ್ತು ಸ್ವಾಮೀಜಿಗಳನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋದರೆ ಹೇಗೆ? ಹಾಗಾಗಿ ಇಂತಹ ಪೂಜ್ಯರ ಬಳಿ ಹೋಗುವಾಗ ಕೈಯಲ್ಲಿ ಫಲ ವಸ್ತುಗಳನ್ನು ಹಿಡಿದುಕೊಂಡು ಹೋದರೆ ಅವರು ಸಂತೃಪ್ತರಾಗುತ್ತಾರೆ ಎನ್ನುವ ನಂಬಿಕೆ.
ತೆಂಗಿನ ಕಾಯಿ, ಬಾಳೆ ಹಣ್ಣು ಸುಲಭದಲ್ಲಿ ಸಿಗುವ ಫಲ ವಸ್ತುಗಳು. ಹೀಗಾಗಿ ಹೆಚ್ಚಿನವರು ಇದನ್ನು ಹಿಡಿದು ಹೋಗುತ್ತಾರೆ. ದೇವರು ಮಗುವಿನ ಸಮಾನರಂತೆ. ಒಂದು ಮಗುವಿರುವ ಮನೆಗೆ ಹೇಗೆ ಮಗುವಿಗೆ ಇಷ್ಟವಾದ ತಿನಿಸು ತೆಗೆದುಕೊಂಡು ಹೋಗುತ್ತೇವೋ ಹಾಗೇ ದೇವರಿಗೂ ಆತನಿಗೆ ಪ್ರಿಯವಾದ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ