ಬೆಂಗಳೂರು: ಮನೆಗೆ ಹೊಸದಾಗಿ ಮದುವೆಯಾಗಿ ಗಂಡನ ಜತೆ ಬರುವ ವಧು ಸೇರು ಅಕ್ಕಿ ಒದ್ದು ಒಳಗೆ ಕಾಲಿಡುತ್ತಾಳೆ. ಇದಕ್ಕೆ ಕಾರಣವೇನು?
ಸೊಸೆ ಮನೆ ಪ್ರವೇಶಿಸುವಾಗ ಅದುವೇ ಅವಳಿಗೆ ಗೃಹಪ್ರವೇಶ. ಅವಳು ಸೇರಿನಲ್ಲಿ ತುಂಬಿಟ್ಟ ಅಕ್ಕಿಯನ್ನು ಒದೆಯುವಾಗ ಅದು ಮನೆ ತುಂಬಾ ಚೆಲ್ಲಬೇಕು.
ಅಕ್ಕಿ ನಮ್ಮ ಆಹಾರ ಮಾತ್ರವಲ್ಲ ಸಮೃದ್ಧತೆಯ ಸಂಕೇತ. ಅದರ ಬೆಳ್ಳಗಿನ ಬಣ್ಣ ಪರಿಶುದ್ಧತೆಯ ಸಂಕೇತ. ಹಾಗಾಗಿ ಮನೆ ಸೊಸೆ ಸೇರಕ್ಕಿ ಒದ್ದು ಮನೆ ತುಂಬಾ ಚೆಲ್ಲುವಂತೆ ಸಮೃದ್ಧತೆ ನಮ್ಮ ಮನೆಯೊಳಗೆ ತುಂಬಿ ತುಳುಕುತ್ತಿರಲಿ ಎನ್ನುವುದು ಇದರ ಮೂಲ ಉದ್ದೇಶ.
ಆಕೆ ಒಳ್ಳೆ ಗುಣ ಹೊತ್ತು ಮನೆ ಪ್ರವೇಶಿಸಬೇಕು. ಆಕೆಯ ಒಳ್ಳೆಯ ಗುಣದಿಂದ ಮನೆಯಲ್ಲಿ ಕೆಟ್ಟ ಭಾವನೆಗಳು ದೂರವಾಗಬೇಕು. ಧವಸ ಧಾನ್ಯಗಳಿಂದ ಮನೆ ತುಂಬಿ ತುಳುಕುತ್ತಿರಬೇಕು ಎಂದು ಹಿರಿಯರು ಇಂತಹದ್ದೊಂದು ಉತ್ತಮ ಕ್ರಮವನ್ನು ಹುಟ್ಟು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ