ಬೆಂಗಳೂರು: ಹರಕೆ ಕಟ್ಟಿಕೊಂಡರೆ ಸಲ್ಲಿಸುವುದು ಅಷ್ಟು ಸುಲಭವಲ್ಲ ಎನ್ನುವವರಿಗೆ ಒಂದು ವಿಶಿಷ್ಟ ದೇವಾಲಯವಿದೆ. ಇಲ್ಲಿ ಕಡುಬಡವನೂ ತನ್ನ ಹರಕೆ ಸಲ್ಲಿಸಬಹುದು.
ಇದು ‘ಸೂರ್ಯ ದೇವಾಲಯ’ ಎಂದೇ ಪ್ರಸಿದ್ಧವಾಗಿರುವ ಶ್ರೀ ಸದಾಶಿವ ರುದ್ದ ದೇವಸ್ಥಾನ! ದಕ ಜಿಲ್ಲೆಯ ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 8 ಕಿ.ಮೀ. ಸಾಗಿದರೆ ಈ ದೇವಾಲಯ ಸಿಗುವುದು.
ಇಲ್ಲಿ ಸದಾಶಿವ ದೇವರು ಆರಾಧ್ಯ ದೈವ. ಭೃಗು ಮಹರ್ಷಿಯ ತಪಸ್ಸಿಗೊಲಿದ ಶಿವ ಪಾರ್ವತಿಯರು ಇಲ್ಲಿ ಲಿಂಗದ ರೂಪದಲ್ಲಿ ನೆಲೆಸಿದರು ಎನ್ನಲಾಗುತ್ತದೆ. ಇದರ ಕುರುಹಾಗಿ ಇಲ್ಲಿ ಲಿಂಗರೂಪಿ ಶಿಲೆಗಳು, ಶಿಲಾಪಾದಗಳೂ ಇವೆಯಂತೆ.
ಇಲ್ಲಿನ ವಿಶಿಷ್ಟ ಪದ್ಧತಿಯೆಂದರೆ ಭಕ್ತಾದಿಗಳು ತಮ್ಮ ಹರಕೆ ಸಲ್ಲಿಸಲು ನಗ, ನಗದು ಕಾಣಿಕೆ ಹಾಕಬೇಕಿಲ್ಲ. ಮಣ್ಣಿನ ಗೊಂಬೆಗಳನ್ನು ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತದೆ. ಸುಮಾರು 700 ವರ್ಷಗಳ ಇತಿಹಾಸವಿರುವ ಈ ದೇವಾಲಯ ಮಣ್ಣಿನ ಗೊಂಬೆಗಳ ಹರಕೆಯಿಂದಲೇ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಇಲ್ಲಿ ಕಡುಬಡವನೂ ಹರಕೆ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ.. ಮಿಥಾಲಿ ರಾಜ್ ಗೆ ತೆಲಂಗಾಣ ಕೊಟ್ಟ ಬಂಪರ್ ಪ್ರೈಸ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ