ಬೆಂಗಳೂರು: ದೇವರ ದೀಪದ ಜತೆಗೆ ಅಗರಬತ್ತಿ ಊದಿಸುವುದು ಎಲ್ಲರೂ ಪಾಲಿಸುವ ಸಂಪ್ರದಾಯ. ಹಿಂದೂ ಸಂಪ್ರದಾಯದಲ್ಲಿ ಅಗರಬತ್ತಿಯ ಮಹತ್ವವೇನು ಗೊತ್ತಾ?
ಅಗರಬತ್ತಿ ಸೂಸುವ ಸುವಾಸನೆ ನಮ್ಮ ಮನಸ್ಸು ನಿರ್ಮಲವಾಗಿ ಏಕಾಗ್ರತೆ ಒದಗಿಸಲು ಸಹಾಯ ಮಾಡುತ್ತದೆ. ಅಗರಬತ್ತಿಯ ಸುವಾಸನೆ ನಮ್ಮಲ್ಲಿ ಭಕ್ತಿ ಭಾವ ಹೆಚ್ಚಿಸುತ್ತದೆ.
ದೇವರಿಗೆ ಮಂತ್ರ ಹೇಳುವಾಗ ವಿವಿಧ ಅಲಂಕಾರಗಳಲ್ಲಿ ದೀಪ, ಧೂಪ ಸೇವೆ ಎನ್ನುತ್ತೇವೆ. ಧೂಪವಾಗಿ ಅಗರಬತ್ತಿಯನ್ನು ಬಳಸಲಾಗುತ್ತದೆ. ದೇವರ ಸುತ್ತಮುತ್ತ ಒಂದು ರೀತಿಯ ಸೌಗಂಧ ವಾತಾವರಣ ನೆಲೆಯಾಗಿದ್ದರೆ ಅಲ್ಲಿ ಶುದ್ಧ ಗಾಳಿ, ನೈರ್ಮಲ್ಯ ಹರಿಯುತ್ತದೆ ಎಂಬ ಕಾರಣಕ್ಕೆ ಅಗರಬತ್ತಿ ಉರಿಸಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ