ಬೆಂಗಳೂರು: ದೇವರನ್ನು ಭಕ್ತಿಯಿಂದ ಪೂಜೆ ಮಾಡುವಾಗ ಗಂಧ, ಕುಂಕುಮದಷ್ಟೇ ಪ್ರಮುಖವಾಗಿ ಬೇಕಾಗಿರುವುದು ಹೂವು. ದೇವರಿಗೆ ಅರ್ಪಣೆಯಾಗುವ ಹೂವು ಪವಿತ್ರವಾಗಿರಬೇಕು. ಅದಕ್ಕೆ ಎಂತಹ ಹೂಗಳಿಂದ ದೇವರನ್ನು ಅರ್ಚಿಸಬೇಕು ನೋಡೋಣ.
ದೇವರಿಗೆ ಆದಷ್ಟು ಶುದ್ಧವಾದ ಹೂಗಳನ್ನು ಅರ್ಪಿಸಬೇಕು. ನೆಲಕ್ಕೆ ಹಾಕಿದ ಹೂಗಳನ್ನು ದೇವರಿಗೆ ಇಡಬೇಡಿ. ಒಂದು ವೇಳೆ ನೆಲಕ್ಕೆ ಬಿದ್ದರೆ, ಕೊಂಚ ನೀರು ಚಿಮುಕಿಸಿ ಶುದ್ಧವಾಗಿ ಅರ್ಪಿಸಿ.
ಆದಷ್ಟು ಕುಸುಮವಿರುವ ಸುಗಂಧ ಭರಿತ ಹೂವುಗಳನ್ನು ದೇವರಿಗೆ ಅರ್ಪಿಸಬೇಕು. ಮಲ್ಲಿಗೆ, ಸೇವಂತಿಗೆ, ದಾಸವಾಳ, ಸಂಪಿಗೆ, ತುಳಸಿ ಹೂವುಗಳು ದೇವರ ಅರ್ಚನೆಗೆ ಸೂಕ್ತ. ಶುಭ ಕಾರ್ಯಗಳಾಗಿದ್ದರೆ ಆದಷ್ಟು ಕೆಂಪು, ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ. ಎಲ್ಲಕ್ಕಿಂತ ಹೆಚ್ಚು ದುಬಾರಿ ಬೆಲೆ ತೆತ್ತು ಅಂಗಡಿಯಿಂದ ಖರೀದಿಸಿದ ಹೂವು ಬೇಕೆಂದೇನಿಲ್ಲ. ನಿಮ್ಮ ಹಿತ್ತಲಲ್ಲಿರುವ ಹೂವನ್ನೇ ಭಕ್ತಿಯಿಂದ ಅರ್ಪಿಸಿದರೂ ಸಾಕು. ದೇವರು ಸಂತೃಪ್ತನಾಗುತ್ತಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ