ಬೆಂಗಳೂರು: ಊಟ ಎಂಬುದು ಯಜ್ಞದಂತೆ. ಯಜ್ಞದ ಸಮಯದಲ್ಲಿ ಭಗವಂತನ ನಾಮಸ್ಮರಣೆ ಬಿಟ್ಟು ಬೇರೇನೂ ಹರಟೆ ಇರಬಾರದು.
ಹಾಗಾಗಿ ಊಟ ಮಾಡುವಾಗ ಬೇರೇನೂ ಲೋಕಾಭಿರಾಮ ಮಾತನಾಡದೆ ದೇವರ ಹೆಸರನ್ನು ಮಾತ್ರ ಸ್ಮರಣೆ ಮಾಡುತ್ತಿರಬೇಕು. ಹಿರಿಯರು ಊಟ ಮುಗಿಸಿ ಏಳುವಾಗ ನಾರಾಯಣ ಎನ್ನುತ್ತಾ ಏಳುವುದನ್ನು ಇಲ್ಲಿ ಸ್ಮರಸಿಕೊಳ್ಳಬಹುದು.
ಕಣ್ಣಿನ ಮೂಲಕ ಅನ್ನ ಬ್ರಹ್ಮನನ್ನು, ಕಿವಿಯಲ್ಲಿ ಭಗವಂತನ ನಾಮ ಸ್ಮರಣೆಯನ್ನು, ನಾಲಿಗೆ ಮೂಲಕ ನೈವೇದ್ಯವನ್ನು ಸ್ವೀಕರಿಸುತ್ತಾ, ಮೂಗಿನ ಮೂಲಕ ಪರಮಾತ್ಮನಿಗೆ ಅರ್ಪಿಸಿದ್ದನ್ನು ಆಘ್ರಾಣಿಸುತ್ತಾ, ಚರ್ಮದ ಮೂಲಕ ನೈವೇದ್ಯವನ್ನು ಸ್ಪರ್ಶಿಸುತ್ತಾ ಅನ್ನ ಸ್ವೀಕರಿಸಬೇಕು. ಹೀಗಾಗಿ ಊಟ ಮಾಡುವಾಗ ದೇವರ ಸ್ಮರಣೆ ವಿನಃ ಬೇರೇನೂ ಮಾತನಾಡಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ