ಬೆಂಗಳೂರು: ಶಿವ ದೇಗುಲಕ್ಕೆ ಹೋಗುವಾಗಲೆಲ್ಲಾ ಅಂಗಡಿಯಿಂದ ಒಂದು ಕಟ್ಟು ಬಿಲ್ವ ಪತ್ರೆ ತೆಗೆದುಕೊಂಡು ಹೋಗಿ ಪೂಜಾರಿಯ ಬಳಿ ಅರ್ಚಿಸಲು ಕೊಡುತ್ತೇವೆ. ಇದರ ಮಹತ್ವವೇನು ಗೊತ್ತಾ?
ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದ ಪತ್ರೆ. ಸಾಧಾರಣವಾಗಿ ಎಲ್ಲಾ ಶಿವ ಕ್ಷೇತ್ರದಲ್ಲಿ ಬಿಲ್ವ ವೃಕ್ಷವಿರುತ್ತದೆ. ಇದು ಮುಳ್ಳುಗಳಿರುವ ಸುವಾಸಿತ ವೃಕ್ಷ. ಇದರ ಎಲೆ ತ್ರಿದಳಗಳಿಂದ ಕೂಡಿರುತ್ತದೆ. ತ್ರಿದಳವಿರುವ ಬಿಲ್ವಪತ್ರೆಯನ್ನೇ ಅರ್ಚಿಸಬೇಕೆನ್ನುತ್ತಾರೆ.
ಈ ತ್ರಿದಳಗಳು ಶಿವ ದೇವರ ಮೂರು ನೇತ್ರಗಳು ಎನ್ನಲಾಗುತ್ತದೆ. ಬಿಲ್ವ ವೃಕ್ಷಕ್ಕೆ ಪ್ರದಕ್ಷಿಣೆ ಬರುವುದರಿಂದ, ಬಿಲ್ವ ಪತ್ರೆಯಿಂದ ಶಿವನನ್ನು ಆರಾಧಿಸುವುದರಿಂದ ನಾವು ಮಾಡಿರುವ ಪಾಪ ಕಾರ್ಯಗಳು ನಾಶವಾಗುವುದೆಂಬ ನಂಬಿಕೆಯಿದೆ.
ಬಿಲ್ವ ವೃಕ್ಷದಲ್ಲಿ ಬಿಡುವ ಕಾಯಿಯೂ ತ್ರಿನೇತ್ರಗಳಿಂದ ಕೂಡಿರುವುದು ವಿಶೇಷ. ಈ ಫಲವನ್ನು ಒಡೆಯಬಾರದು ಎಂಬ ನಂಬಿಕೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ