Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು ಯಾವೆಲ್ಲಾ ಗೊತ್ತಾ?

ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು ಯಾವೆಲ್ಲಾ ಗೊತ್ತಾ?
ಬೆಂಗಳೂರು , ಸೋಮವಾರ, 10 ಡಿಸೆಂಬರ್ 2018 (08:49 IST)
ಬೆಂಗಳೂರು: ಗೋವಿನಲ್ಲಿ 32 ದೇವತೆಗಳ ವಾಸವಿದೆ ಎಂಬ ನಂಬಿಕೆಯಿದೆ. ಹೀಗಾಗಿ ಗೋವನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ. ಆ 32 ದೇವತೆಗಳ ವಿವರ ಇಲ್ಲಿದೆ ನೋಡಿ.


  1. ತಲೆಯ ಮಧ್ಯಭಾಗದಲ್ಲಿ ಈಶ್ವರ
  2. ಹಣೆಯ ತುದಿಯಲ್ಲಿ ಪಾರ್ವತಿ
  3. ಮೂಗಿನಲ್ಲಿ ಸುಬ್ರಹ್ಮಣ್ಯ
  4. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥ
  5. ಕೋಡಿನ ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣು
  6. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ
  7. ಕಿವಿಗಳಲ್ಲಿ ಅಶ್ವಿನೀಕುಮಾರರು
  8. ಕಣ್ಣುಗಳಲ್ಲಿ  ಸೂರ್ಯ, ಚಂದ್ರರು
  9. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ.
  10. ನಾಲಗೆಯಲ್ಲಿ ವರುಣ
  11. ಗಂಡ ಸ್ಥಳಗಳಲ್ಲಿ ಮಾಸ ಮತ್ತು ಪಕ್ಷ ದೇವತೆಗಳು
  12. ತುಟಿಗಳಲ್ಲಿ ಸಂಧ್ಯಾದೇವತೆ
  13. ಕುತ್ತಿಗೆಯಲ್ಲಿ ಇಂಧ್ರ
  14. ಹೃದಯದಲ್ಲಿ ಸಾಧ್ಯ ದೇವಗಣಗಳು
  15. ತೊಡೆಯಲ್ಲಿ ಧರ್ಮ ದೇವತೆಗಳು
  16. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ
  17. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ
  18. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರು
  19. ಬೆನ್ನಿನಲ್ಲಿ ರುದ್ರರ ವಾಸ
  20. ಎಲ್ಲಾ ಸಂಧಿಗಳಲ್ಲಿ ಅಷ್ಟವಸುಗಳು
  21. ಬಾಲದಲ್ಲಿ ಸೋಮದೇವತೆಗಳು
  22. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರು
  23. ರೋಮಗಳಲ್ಲಿ ಸೂರ್ಯನ ಕಿರಣಗಳು
  24. ಗೋ ಮೂತ್ರದಲ್ಲಿ ಗಂಗೆಯ ವಾಸ
  25. ಗೋ ಮಯದಲ್ಲಿ ಯಮುನೆ
  26. ಹಾಲಿನಲ್ಲಿ ಸರಸ್ವತಿ
  27. ಮೊಸರಿನಲ್ಲಿ ನರ್ಮದೆ
  28. ತುಪ್ಪದಲ್ಲಿ ಅಗ್ನಿ
  29. ಕೂದಲುಗಳಲ್ಲಿ 33 ಕೋಟಿ ದೇವತೆಗಳು
  30. ಸ್ತನಗಳಲ್ಲಿ ನಾಲ್ಕು ಸಾಗರಗಳು
  31. ಉದರದಲ್ಲಿ ಪೃಥ್ವಿ ದೇವತೆಗಳು
  32. ಸಗಣಿ ಇಡುವಲ್ಲಿ ಮಹಾಲಕ್ಷ್ಮೀ
ಹೀಗೇ ಗೋವಿನಲ್ಲಿ ಬ್ರಹ್ಮಾಂಡ ದೇವತೆಗಳೇ ನೆಲೆಸಿದ್ದಾರೆ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿಯನ್ನು ಈ ರೀತಿ ಪೂಜಿಸುವುದರಿಂದ ಕೆಲಸಕ್ಕೆ ಬರುವ ವಿಘ್ನಗಳ ನಿವಾರಣೆ ಗ್ಯಾರಂಟಿ