ಬೆಂಗಳೂರು:ಯುವಕ-ಯುವತಿಯರಿಗೆ ಅಥವಾ ಮಹಿಳೆಯರು-ಪುರುಷರಿಗೆ ಸ್ವಲ್ಪ ಹೊಟ್ಟೆ ಬರುತ್ತಿದೆ ಎಂದರೆ ಅಥವಾ ಬಿಜ್ಜುಬರುತ್ತಿದೆ ಎಂದರೆ ನಮ್ಮನ್ನು ತುಂಬಾ ವಿಚಿತ್ರವಾಗಿ ನೋಡುವವರೆ ಹೆಚ್ಚು. ಬೊಜ್ಜು ಕರಗಬೇಕು. ಆದ್ರೆ ವ್ಯಾಯಾಮ, ಜಿಮ್ ಮಾಡಲು ಟೈಮಿಲ್ಲ. ಸ್ಥೂಲಕಾಯ, ಹೊಟ್ಟೆ ದಪ್ಪವಿರುವುದರಿಂದ ಇಷ್ಟವಾದ ಬಟ್ಟೆಗಳನ್ನು ಹಾಕಿಕೊಳ್ಳಲು ಕಷ್ಟ. ಇಂತಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ.
ಸಣ್ಣವಾಗಬೇಕು ಆದ್ರೆ ಹೇಗೆ ಎಂಬ ಚಿಂತಿಗೆ ಅಡುಗೆಮನೆಯಲ್ಲಿಯೇ ಇದೆ ಸುಲಭ ಪರಿಹಾರ. ನೀವು ದಿನನಿತ್ಯ ಉಪಯೋಗಿಸುವ ಆಹಾರ ಶೈಲಿಯಲ್ಲಿ ಸ್ವಲ್ಪ ಬದವಾಣೆ ಮಾಡಿಕೊಂಡರೆ ಸಾಕು. ನಿಮ್ಮ ದೇಹದ ತೂಕವನ್ನು, ದಪ್ಪ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
ಜೇನುತುಪ್ಪ: ಪ್ರತಿದಿನ ಮುಂಜಾನೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿಯಿರಿ.
ಚೆಕ್ಕೆ: ಪ್ರತಿದಿನ ಚೆಕ್ಕೆಯನ್ನು ಅಗೆಯುವುದರಿಂದ ಅಥವಾ ಒಂದು ಗ್ಲಾಸ್ ನೀರಿಗೆ ಚೆಕ್ಕೆಯನ್ನು ಹಾಕಿ ನೀರನ್ನು ಕುದಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಬೆಳ್ಳುಳ್ಳಿ: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ಬೆಳ್ಳುಳ್ಳಿ ಎಸಳನ್ನು ಅಗೆದು ತಿನ್ನಿ. ಇದರಿಂದ ಕೊಲೆಸ್ಟ್ರಾಲ್ ಹಾಗೂ ಅನಾರೋಗ್ಯಕರ ಕೊಬ್ಬನ್ನು ಕಡಿಮೆಮಾಡಲು ಸಹಕಾರಿಯಾಗಿದೆ.
ಶುಂಠಿ: ಟೀ-ಕಾಫಿ ಸೇವನೆಯನ್ನು ಕಡಿಮೆ ಮಾಡಿ ಹಶಿ ಶುಂಠಿ ಟೀಯನ್ನು ಮಾಡಿ ಕುಡಿಯಿರಿ. ಒಂದು ಗ್ಲಾಸ್ ನಷ್ಟು ನೀರಿಗೆ ಸ್ವಲ್ಪ ಹಶಿ ಶುಂಠಿಯನ್ನು ಜಜ್ಜಿ ಹಾಕಿ 5 ನಿಮಿಷ ಕುದಿಸಿ. ಬಳಿಕ ಇದನ್ನು ಒಂದು ಕಪ್ ಗೆ ಹಾಕಿ ಅದಕ್ಕೆ ಒಂದು ಚಮಚ ಜೇನು ತುಪ್ಪ ಬೆರೆಸಿ ನಿಧಾನವಾಗಿ ಸವಿಯಿರಿ ಹೀಗೆ ಮಾಡುವುದರಿಂದ ನಿಮ್ಮ ದಪ್ಪ ಹೊಟ್ಟೆ ಸಮಸ್ಯೆ ಜತೆ ಹೊಟ್ಟೆಯಲ್ಲಿನ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಮೊಳಕೆಬರಿಸಿದ ಹೆಸರುಕಾಳು: ಬೆಳಿಗ್ಗೆ ತಿಂಡಿ ಮಾಡಲು ಸಮಯವಿಲ್ಲ ಎಂಬುವವರಿಗೆ ಜತೆಗೆ ಸನ್ಣಗಾಗಬೇಕೆಂದು ಬೆಳಗಿನ ಉಪಹಾರ ಬಿಡುವವರಿಗೆ ಇದು ಉತ್ತಮ ಆಹಾರ. ಮೊಳಕೆಕಟ್ಟಿದ ಹೆಸರುಕಾಳುಗಳನ್ನು ಬೆಳಿಗ್ಗೆ ಸಣ್ಣಗೆ ಹೆಚ್ಚಿದ ಹಸಿ ಈರುಳ್ಳಿ( ಬೇಕಿದ್ದರೆ ಸ್ವಲ್ಪ ಬಾಡಿಸಿಕೊಳ್ಳಿ), ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು, ಎರಡು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಉಪಹಾರದ ಬದಲು ಸೇವಿಸುವುದು. ಇದರಲ್ಲಿನ ಕಬ್ಬಿಣಾಂಶ, ಅಧಿಕನಾರಿನಾಂಶಗಳು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಿಮ್ಮ ತೂಕವನ್ನೂ ಕಡಿಮೆಮಾಡುವಲ್ಲಿ ಸಹಕಾರಿಯಾಗಿದೆ.