Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣುಗಳ ಸುತ್ತಿನ ಡಾರ್ಕ್ ಸರ್ಕಲ್ ನಿಮ್ಮ ಅಂದ ಹಾಳು ಮಾಡುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ

ಕಣ್ಣುಗಳ ಸುತ್ತಿನ ಡಾರ್ಕ್ ಸರ್ಕಲ್ ನಿಮ್ಮ ಅಂದ ಹಾಳು ಮಾಡುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಶುಕ್ರವಾರ, 24 ಸೆಪ್ಟಂಬರ್ 2021 (08:19 IST)
Dark Circle: ಅನೇಕರು ಡಾರ್ಕ್ ಸರ್ಕಲ್ ಕಾಣಿಸಿಕೊಂಡಾಗ ಮನೆಮದ್ದು ಅಥವಾ ವೈದ್ಯರನ್ನು ಭೇಟಿಯಾಗುತ್ತಾರೆ. ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ನಮ್ಮಲ್ಲಿರುವ ಕೆಲವು ಸಮಸ್ಯೆಯಿಂದ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳಲು ಸಾಮಾನ್ಯ ಕಾರಣಗಳು ಅದಕ್ಕೆ ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸುಂದರ ಕಣ್ಣುಗಳನ್ನು, ಕಣ್ಣುಗಳ ಸುತ್ತ ಆರೋಗ್ಯಕರ ವಾದ ಚರ್ಮವನ್ನು ಹೊಂದಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವರಲ್ಲಿ ಕಣ್ಣಿನ ಕೆಳಭಾಗದಲ್ಲಿ  ಚರ್ಮದ ಸುತ್ತ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಇದು ಮುಖದ ಅಂದವನ್ನು ಹದಗೆಡಿಸುವುದಲ್ಲ, ಸಮಸ್ಯೆಯಾಗಿ ಕಾಡುತ್ತದೆ. ಅನೇಕರು ಡಾರ್ಕ್ ಸರ್ಕಲ್ ಕಾಣಿಸಿಕೊಂಡಾಗ ಮನೆಮದ್ದು ಅಥವಾ ವೈದ್ಯರನ್ನು ಭೇಟಿಯಾಗುತ್ತಾರೆ. ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ನಮ್ಮಲ್ಲಿರುವ ಕೆಲವು ಸಮಸ್ಯೆಯಿಂದ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳಲು ಸಾಮಾನ್ಯ ಕಾರಣಗಳು ಅದಕ್ಕೆ ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
webdunia

ಡಾರ್ಕ್ ಸರ್ಕಲ್ ಗಳಿಗೆ ಅತ್ಯಂತ ಸಾಮಾನ್ಯ ಕಾರಣಗಳು: ಅನುವಂಶೀಯತೆ, ನಿದ್ರೆ ಯ ಕೊರತೆ, ಕಣ್ಣಿನ ಒತ್ತಡ, ಅಲರ್ಜಿಗಳು ,ಅತಿಯಾದ ಸೂರ್ಯನ ಕಿರಣಗಳು, ವಯಸ್ಸು
ಪರಿಹಾರವೇನು?
1. ಜೀವನಶೈಲಿ
ಉತ್ತಮ ನಿದ್ರೆ - ಕನಿಷ್ಠ 8 ಗಂಟೆ ನಿದ್ದೆ ಯ ಅಗತ್ಯವಿರುತ್ತದೆ. ಸಾಕಷ್ಟು ನಿದ್ದೆ ಯಿಂದ ಕಣ್ಣುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಡಾರ್ಕ್ ಸರ್ಕಲ್ ಗಳು ಕೂಡ ಕಡಿಮೆ ಯಾಗಿ ಕಾಣುವಂತೆ ಮಾಡುತ್ತದೆ.
ನಿದ್ರೆ/ಮಲಗುವ ವಿಧಾನ ಬದಲಿಸುವುದು: ನಿಮ್ಮ ಕಣ್ಣುಗಳ ಕೆಳಗೆ ದ್ರವ ಶೇಖರಣೆಯಾಗದಂತೆ ತಡೆಯಲು ಕೆಲವು ದಿಂಬುಗಳನ್ನು ತಲೆದಿಂಬುಗಳಿಂದ ಮೇಲೆತ್ತಬೇಕು, ಇದು ಅವು ಉಬ್ಬಿದ ಮತ್ತು ಊದಿದಂತೆ ಕಾಣುವಂತೆ ಮಾಡಬಹುದು. ಸ್ಕ್ರೀನ್ ಟೈಮ್ ಕಡಿಮೆ ಮಾಡಿ ಮತ್ತು ಕಣ್ಣುಗಳಿಗೆ ತೊಂದರೆಆಗುವುದನ್ನು ತಪ್ಪಿಸಲು ಆಗಾಗ್ಗೆ ಬ್ರೇಕ್ ಗಳನ್ನು ತೆಗೆದುಕೊಳ್ಳಿ. ಆಗಾಗ ಕಣ್ಣು ಮಿಟುಕಿಸಿ.
ಉಪ್ಪು ಆಹಾರಗಳ ಮೇಲೆ ಕಡಿವಾಣ ಹಾಕಿ ಉಪ್ಪು ದ್ರವವನ್ನು ಧಾರಣೆ ಮಾಡಿ ಉಪ್ಪು ಆಹಾರಗಳು ಮುಖ ಮತ್ತು ಕಣ್ಣುಗಳಿಗೆ ಉಬ್ಬರ ಉಂಟು ಮಾಡುತ್ತದೆ.
ಆಲ್ಕೋಹಾಲ್ ನಿಂದ ದೂರವಿರಿ – ಆಲ್ಕೋಹಾಲ್ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಇದು ಡಾರ್ಕ್ ಸರ್ಕಲ್ ಗಳಿಗೆ ಮತ್ತು ಕಣ್ಣಿನ ಚೀಲಗಳಿಗೆ ಕಾರಣವಾಗುತ್ತದೆ. ಧೂಮಪಾನದಿಂದ ದೂರವಿರಿ - ಧೂಮಪಾನವು ನಿಮ್ಮ ದೇಹದ ಆಂಟಿ ಆಕ್ಸಿಡೆಂಟ್ ಸ್ಟೋರ್ ಗಳನ್ನು ಕಡಿಮೆ ಮಾಡುತ್ತದೆ, ಇದು ಕೊಲಾಜೆನ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ನಿಮ್ಮನ್ನು ನೀವು ಚೆನ್ನಾಗಿ ಹೈಡ್ರೇಟ್ ಮಾಡಿ ಕೊಳ್ಳಿ .ರಾತ್ರಿ ವೇಳೆ ಮಲಗುವ ಮುನ್ನ ಮೇಕಪ್ ಅನ್ನು ಸ್ವಚ್ಛಗೊಳಿಸಿ ರಾತ್ರಿ ಮಲಗುವ ಮುನ್ನ ಮುಖ ತೊಳೆಯಿರಿ. ಮೇಕಪ್ ಉತ್ಪನ್ನಗಳು ಅಲರ್ಜಿ ಮತ್ತು ಕಣ್ಣಿನ ಕೆಳಭಾಗದ ಉಬ್ಬಸ ಉಂಟುಮಾದುತ್ತದೆ. ಆದ್ದರಿಂದ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳಿಯಿರಿ.
2. ಕೋಲ್ಡ್ ಕಂಪ್ರೆಸ್ಗಳು
webdunia

ಐಸ್ ಕ್ಯೂಬ್ ಗಳನ್ನು ಒಂದು ಬಟ್ಟೆಯಲ್ಲಿ ಮುಚ್ಚಿ ಕಣ್ಣಿನ ಸುತ್ತ ಮಸಾಜ್ ಮಾಡಿ. ಕಣ್ಣಿನ ಸುತ್ತ ರಕ್ತಪರಿಚಲನೆ ಯನ್ನು ಸುಧಾರಿಸಲು ಮತ್ತು ರಕ್ತನಾಳಗಳನ್ನು ಕುಗ್ಗಿಸುವಲ್ಲಿ ಸಹಾಯ ಮಾಡುತ್ತದೆ, ಇದರಿಂದ ಕಣ್ಣುಗಳ ಉಬ್ಬರಕಡಿಮೆಯಾಗುತ್ತದೆ.
3. ಗ್ರೀನ್ ಟೀ ಬ್ಯಾಗ್ ಗಳು
ಚಹಾದಲ್ಲಿರುವ ಕೆಫೀನ್ ಪ್ರಬಲ ಆಂಟಿ ಆಕ್ಸಿಡೆಂಟುಗಳನ್ನು ಒಳಗೊಂಡಿದೆ ಮತ್ತು ನಿಮ್ಮ ಚರ್ಮಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಯುವಿ ಕಿರಣಗಳಿಂದ ರಕ್ಷಣೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುದನ್ನೂ ಸಹ ಇದು ಹೊಂದಿದೆ ಎಂದು ಹೇಳಲಾಗುತ್ತದೆ.
ಬಳಸಿದ ಗ್ರೀನ್ ಟೀ ಬ್ಯಾಗ್ ಗಳನ್ನು ತೆಗೆದುಕೊಳ್ಳಿ. ಟೀ ಬ್ಯಾಗ್ ಗಳು 20 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾಗಲು ಬಿಡಿ. ನಂತರ* ನಂತರನಿಮ್ಮ ಅಂಡರ್ ಐ ಏರಿಯಾಕ್ಕೆ ಹಚ್ಚಿಕೊಳ್ಳಿ. ಟೀ ಬ್ಯಾಗ್ ಗಳನ್ನು 15 ರಿಂದ 30 ನಿಮಿಷ ಹಾಗೆಯೇ ಬಿಡಿ.
4. ಹಣ್ಣುಗಳು ಮತ್ತು ತರಕಾರಿಗಳು
webdunia

ಸೌತೆಕಾಯಿ, ಆಲೂಗಡ್ಡೆ ಮತ್ತು ಟೊಮೆಟೊ ಮತ್ತು ಕಿತ್ತಳೆ ರಸವನ್ನು ಕಣ್ಣಿನ ಸುತ್ತ ಮುತ್ತ ಮಸಾಜ್ ಮಾಡುವುದರಿಂದ ಕಪ್ಪು ವರ್ತುಲಗಳು ಕಡಿಮೆಮಾಡಲು ಮತ್ತು ಕಣ್ಣಿನ ಕೆಳಭಾಗದಲ್ಲಿ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
5. ಸನ್ ಸ್ಕ್ರೀನ್
ಕಣ್ಣುಗಳ ಸುತ್ತ ಸನ್ ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ. ಫೋಟೋಪಿಗ್ಮೆಂಟೇಶನ್ ಅನ್ನು ತಡೆಗಟ್ಟಲು. ಸನ್ ಸ್ಕ್ರೀನ್ ಗಳು ಯುವಿಎ ಮತ್ತು ಯುವಿಬಿ ಯಿಂದ ರಕ್ಷಣೆ ಯನ್ನು ನೀಡುವ ಒಂದು ವಿಶಾಲ ವಾದ ಸ್ಪೆಕ್ಟ್ರಮ್ ಆಗಿದೆ.
6. ಆಹಾರ ಕ್ರಮ
ನಿಮ್ಮ ಆಹಾರದಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಸಮೃದ್ಧ ಆಹಾರವನ್ನು ಹೆಚ್ಚಿಸಿ. ತರಕಾರಿಗಳಾದ ಪಪ್ಪಾಯಿ, ಕ್ಯಾರೆಟ್, ದಾಳಿಂಬೆ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿದ್ದು, ಇದು ಆರೋಗ್ಯಕರ ಮತ್ತು ಕಾಂತಿಯುತ ಚರ್ಮಕ್ಕೆ ಅಗತ್ಯವಾಗಿದೆ. ಆದ್ದರಿಂದ ಅವುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
ನಾವು ನಮ್ಮ ಸುಂದರ ತ್ವಚೆಯ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಆರೋಗ್ಯಕರ ಚರ್ಮವು ಒಂದು ಪವಾಡವಲ್ಲ ಎಂಬುದನ್ನು ಅರಿತುಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು?