ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಪಡೆಯುವುದು ಪ್ರತಿಯೊಬ್ಬರ ಕನಸೂ ಆಗಿದೆ. ಬ್ಯೂಟಿಪಾರ್ಲರ್‌ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರುತ್ತಾರೆ. ಆದರೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.
1. ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಫೇಸ್‌ಪ್ಯಾಕ್ -
1 ಚಮಚ ಜೇನು ತುಪ್ಪ ಮತ್ತು 2 ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.
2. ಅಕ್ಕಿ ಹಿಟ್ಟಿನ ಫೇಸ್‌ಪ್ಯಾಕ್ -
2 ಚಮಚ ಅಕ್ಕಿ ಹಿಟ್ಟಿಗೆ, 1 ಚಮಚ ಮೊಸರನ್ನು ಸೇರಿಸಿ ಮುಖಕ್ಕೆ ಹಗುರವಾಗಿ ಉಜ್ಜಿ, 2 ನಿಮಿಷಗಳ ಕಾಲ ಸ್ಕರ್ಬ್ ಮಾಡಿ, ನಂತರ ಮುಖವನ್ನು ತೊಳೆದುಕೊಳ್ಳಿ.
3. ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್ -
1 ಚಮಚ ಮುಲ್ತಾನಿಮಿಟ್ಟಿಗೆ ಸ್ವಲ್ಪ ನಿಂಬೆ ರಸ ಮತ್ತು ಗುಲಾಬಿ ಜಲವನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿಕೊಳ್ಳಿ. ಈ ಪ್ಯಾಕ್ ಒಣಗಿದ ನಂತರ ತಂಪಾದ ನೀರಿಸಿಂದ ಮುಖವನ್ನು ತೊಳೆದುಕೊಳ್ಳಿ. ಈ ಫೇಸ್‌ಪ್ಯಾಕ್ ಅನ್ನು ವಾರಕ್ಕೆ 3 ಬಾರಿ ಬಳಸಿ.
4. ಬಾದಾಮಿ ಪುಡಿ ಮತ್ತು ಮೊಸರಿನ ಫೇಸ್‌ಪ್ಯಾಕ್ -
1 ಚಮಚ ಬಾದಾಮಿ ಪುಡಿಗೆ ಮತ್ತು 1 ಚಮಚ ಮೊಸರನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ ಹಗುರವಾಗಿ ಉಜ್ಜಿ 10 ನಿಮಿಷ ಹಾಗೆ ಬಿಡಿ, ನಂತರ ತಂಪಾದ ನೀರಿಸಿಂದ ಮುಖವನ್ನು ತೊಳೆದುಕೊಳ್ಳಿ.
5. ಕಡಲೆ ಹಿಟ್ಟಿನ ಫೇಸ್‌ಪ್ಯಾಕ್ -
1 ಚಮಚ ಕಡಲೆ ಹಿಟ್ಟಿಗೆ, ಸ್ವಲ್ಪ ಅರಿಶಿಣ ಮತ್ತು ಹಾಲು ಹಾಕಿ ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ, ಒಣಗಲು ಬಿಡಿ. 10 ನಿಮಿಷಗಳ ನಂತರ ತಂಪಾದ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.