Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ 5 ಮಸಾಲೆ ಪದಾರ್ಥಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ !!

ಈ 5 ಮಸಾಲೆ ಪದಾರ್ಥಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ !!
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (16:06 IST)
ಭಾರತೀಯ ಮಸಾಲೆಗಳು ಪ್ರಪಂಚದಾದ್ಯಂತ ಯಾವುದೇ ಭಕ್ಷ್ಯಕ್ಕೆ ಸುವಾಸನೆಯನ್ನು ಸೇರಿಸುವುದಕ್ಕಾಗಿ ಪ್ರಸಿದ್ಧವಾಗಿವೆ, ಆದರೆ ಮಸಾಲೆಗಳು ಚರ್ಮ ಮತ್ತು ಕೂದಲನ್ನು ಅದ್ಭುತಗೊಳಿಸುತ್ತದೆ.
1. ದಾಲ್ಚಿನ್ನಿ / ಚಕ್ಕೆ
 
ದಾಲ್ಚಿನ್ನಿ ಕೆಲವು ಉತ್ತಮ ಆರೋಗ್ಯಕರ ಮತ್ತು ಸೌಂದರ್ಯದಾಯಕ ಪ್ರಯೋಜನಗಳನ್ನು ಹೊಂದಿದೆ. ಇದು ಉತ್ತಮ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ಇದನ್ನು ಬಳಸಬಹುದಾಗಿದೆ. 1/2 ಚಮಚ ದಾಲ್ಚಿನ್ನಿ ಪುಡಿಗೆ ಸ್ವಲ್ಪ ನೀರು ಸೇರಿಸಿ, ಪೇಸ್ಟ್ ತಯಾರಿಸಿ ಮೊಡವೆಗಳಿರುವ ಜಾಗಕ್ಕೆ ಲೇಪಿಸಿ. ಮುಖದ ಮೇಲೆ ಇದ್ದನ್ನು ಲೇಪಿಸುವುದರಿಂದ ಆಗುವ  ರಕ್ತದ ಪರಿಚಲನೆಯಿಂದ ಚರ್ಮದ ನವ ಯೌವನವಾಗಿರುತ್ತದೆ.
 
2. ಅರಿಶಿನ
 
ಅರಿಶಿನದಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತೇವೆ. ಅರಿಶಿನವು ಅದ್ಭುತ ಆಂಟಿ ಏಜಿಂಗ್, ಆಂಟಿ- ಆಕ್ಸಿಡೆಂಟ್ ಮತ್ತು ಆಂಟಿಸೆಪ್ಟಿಕ್ ಲಕ್ಷಣಗಳನ್ನು ಹೊಂದಿದೆ. ಸೌಂದರ್ಯ ಉತ್ಪನ್ನವಾಗಿ, ಇದನ್ನು ಚರ್ಮದ ಕ್ರೀಮ್‌ಗಳಲ್ಲಿ ಕೂಡಾ ಬಳಸಲಾಗುತ್ತದೆ. ಇದನ್ನು ಚರ್ಮಕ್ಕೆ ಹೊಳಪು ನೀಡುವ ಗುಣಲಕ್ಷಣಗಳನ್ನು ಹೊಂದಿದೆ. ಇದರ ಅದ್ಭುತ ಫಲಿತಾಂಶಗಳಿಗಾಗಿ ಇದನ್ನು ಜೇನುತುಪ್ಪದೊಂದಿಗೆ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಬೇಕು.
 
3. ಕೊತ್ತುಂಬರಿ ಬೀಜಗಳು
 
ಕೊತ್ತುಂಬರಿ ಎಲೆಗಳು ಮತ್ತು ಬೀಜಗಳೆರಡೂ ಆಂಟಿಆಕ್ಸಿಡಾಂಟ್‌ಗಳನ್ನು ಒಳಗೊಂಡಿರುತ್ತದೆ. ಇವು ದೇಹಕ್ಕೆ ತುಂಬಾ ತಂಪು ಮತ್ತು ಹಿತವಾಗಿರುತ್ತದೆ. ನೀವು ಕೊತ್ತುಂಬರಿ ಬೀಜವನ್ನು ರಾತ್ರಿ ಇಡೀ ನೆನೆಸಿ ಮುಖದ ಕ್ಲೆನ್ಸರ್ ಆಗಿ ನೀರನ್ನು ಬಳಸಿದರೆ, ಇದು ಅದ್ಭುತ ತಂಪಾಗಿಸುವ ಪರಿಣಾಮವನ್ನು ನೀಡುತ್ತದೆ ಮತ್ತು ಮುಖವನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ.
 
4. ಕರಿ ಮೆಣಸು
 
ಕಪ್ಪು ಮೆಣಸು ಎಕ್ಸ್ಫಾಲಿಯೇಶನ್‌ಗೆ ಬಹಳ ಒಳ್ಳೆಯದು. ನೀವು ಇದರ ಪುಡಿ ಮಾಡಿಯಿಂದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೊಡವೆ ಕಲೆಗಳು ಮತ್ತು ಇತರೆ ಕಲೆಗಳು ಮಾಯವಾಗುತ್ತದೆ. ಇದು ಮೊಡವೆಗಳನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2 ಚಮಚ ಮೊಸರಿಗೆ 1/4 ಚಮಚ ಕರಿ ಮೆಣಸಿನ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ.
 
5. ಶುಂಠಿ
 
ಶುಂಠಿಯು ಚರ್ಮದ ನವ ಯೌವನ ಪಡೆಯುವಿಕೆಗೆ ಸಹಾಯ ಮಾಡುತ್ತದೆ ಮತ್ತು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಇದರ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸುವ ಮೂಲಕ ಚರ್ಮದ ಬಣ್ಣವನ್ನು ಸುಧಾರಿಸಬಹುದು. ಇದು ಮುಖದ ಕಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಟ್ಸ್ ಇಡ್ಲಿ