ಥೈವಾನ್: ಸೌಂದರ್ಯ ಅಂದ್ರೆ ಹೀಗಿರಬೇಕು ಅಲ್ವಾ. ನಿಜವಾದ ವಯಸ್ಸನ್ನೇ ಮರೆಮಾಚುವಂತಿರಬೇಕು. ಆದರೆ ಅದು ಸಾಧ್ಯಾನಾ. ಒಂದಲ್ಲ ಒಂದು ದಿನ ಎಲ್ಲರಿಗೂ ವಯಸ್ಸಾಗತ್ತೆ. ಇನ್ನೇನು ಮಕ್ಕಳೆಲ್ಲಾ ಬೆಳೆದು ದೊಡ್ಡವರಾದ್ರು. ಜವಾಬ್ದಾರಿನೂ ಜಾಸ್ತಿಯಾಯ್ತು ಅಂತಾ ಅದೆಷ್ಟೋ ಮಹಿಳೆಯರು ತಮ್ಮ ಸೌಂದರ್ಯ, ತ್ವಚೆ, ಬಗ್ಗೆ ನಿರ್ಲಕ್ಷ ಮಾಡುತ್ತಾರೆ. ಆದರೆ ವಯಸ್ಸಾಯಿತು ಅಂತ ನಿಮ್ಮ ಸೌಂದರ್ಯದ ಬಗ್ಗೆ ನೀವೇ ಕಾಳಜಿ ಮಾಡಿಲ್ಲ ಅಂದ್ರೆ ಹೇಗೆ..? ಇಷ್ಟೆಲ್ಲ ಪೀಠಿಕೆ ಯಾಕೆ ಗೊತ್ತಾ? ಅಲ್ಲೇ ಇರೋದು ಇಂಟ್ರೆಸ್ಟಿಂಗ್ ವಿಷಯ.
ಈ ಫೋಟೋದಲ್ಲಿರುವ ಮಹಿಳೆಯರ ವಯಸ್ಸು ಎಷ್ಟಾಗಿರಬಹು ಯೋಚ್ಸಿ..ಇವ್ರನ್ನಾ ನೋಡಿದ್ರೆ ಹೆಚ್ಚು ಅಂದ್ರೆ 20-22 ವರ್ಷ ಇರ್ಬಹುದು ಅಂದ್ಕೊಂಡ್ರಾ.. ಖಂಡಿತಾ ನಿಮ್ಮ ಊಹೆ ತಪ್ಪು. ಈ ಫೋಟೊದಲ್ಲಿ ಓರ್ವ ತಾಯಿ ಇಬ್ಬರು ಮಕ್ಕಳಿದ್ದಾರೆ. ತಾಯಿಯ ವಯಸ್ಸು 63 ವರ್ಷ. ಮಕ್ಕಳ ವಯಸ್ಸು 41 ವರ್ಷ. ಶಾಕ್ ಆದ್ರಾ... ನಂಬೋಕೂ ಆಕ್ತಾ ಇಲ್ಲಾ ಅಲ್ವಾ. ಆದ್ರೆ ನಂಬಲೇ ಬೇಕು.
63 ವರ್ಷ, 41 ವರ್ಷದಲ್ಲಿರುವ ಈ ಮಹಿಳೆಯರ ಸೌಂದರ್ಯ, ಮೈಮಾಟ ಕಾಲೇಜು ಹುಡುಗಿಯರನ್ನೂ ನಾಚಿಸುವಂತಿದೆ. ಥೈವಾನ್ ನಲ್ಲಿರುವ ಈ ಕುಟುಂಬ ವಯಸ್ಸನ್ನೇ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯೂರ್ ಮತ್ತು ಆಕೆಯ ಸಹೋದರಿಗೆ ಈ ಆರೋಗ್ಯಪೂರ್ಣ ಕಳೆ ಬಂದಿರುವುದು ಅವರ ತಾಯಿಯಿಂದ. 63 ವರ್ಷ ವಯಸ್ಸಾಗಿರುವ ಅವರ ತಾಯಿಯ ಚರ್ಮ ಕೊಂಚವೂ ಸುಕ್ಕುಗಟ್ಟಿಲ್ಲವಂತೆ. ಅವರ ಈ ಅಪೂರ್ವ ಸೌಂದರ್ಯದ ಗುಟ್ಟು ಏನು ಎಂದು ಕೇಳಿದ್ರೆ ಅವರು ಹೇಳೋದು ಸ್ವಚ್ಛವಾದ ನೀರು. ದಿನಕ್ಕೆ 500 ಎಂ ಎಂಲ್ ನಷ್ಟು ನೀರು ಕುಡಿಯುತ್ತಾರಂತೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೆ ನಮ್ಮ ಚರ್ಮವನ್ನು ಸುಕ್ಕಾಗದಂತೆ ನೋಡಿಕೊಳ್ಳಬಹು ಎಂಬುದು ಈ ಬ್ಯೂಟಿ ಕ್ವೀನ್ ಗಳ ಸಲಹೆ. ನಿಜಕ್ಕೂ ಗ್ರೇಟ್ ಅಲ್ವಾ..