ಬೆಂಗಳೂರು: ಎಲ್ಲರ ಕೈಯಲ್ಲೂ ಐದೇ ಬೆರಳು. ಆದರೆ ಅದರ ಗಾತ್ರ ಮಾತ್ರ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ನೀಳ ಬೆರಳುಗಳಿದ್ದರೆ, ಇನ್ನು ಕೆಲವರಿಗೆ ಚೋಟು ಬೆರಳಿರುತ್ತದೆ.
ಆದರೆ ನಿಮ್ಮ ಬೆರಳು ಎಷ್ಟು ಉದ್ದ ಇದೆ ಎನ್ನುವುದು ನಿಮ್ಮ ಭವಿಷ್ಯ ಹೇಳುತ್ತದಂತೆ! ನಿಮ್ಮ ಬೆರಳಿನ ಉದ್ದ ನಿಮ್ಮಲ್ಲಿರುವ ಕ್ರೀಡಾ ಸಾಮರ್ಥ್ಯವನ್ನು ನಿರ್ಧರಿಸುತ್ತದೆ ಎಂದು ಅಮೆರಿಕಾದ ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ಒಬ್ಬರ ತೋರುಬೆರಳು ಮತ್ತು ಪವಿತ್ರ ಬೆರಳಿಗೂ ಮಾಂಸಖಂಡಗಳ ಸಾಮರ್ಥ್ಯಕ್ಕೂ ಸಂಬಂಧವಿದೆ ಎನ್ನುವುದು ಅಧ್ಯಯನಕಾರರು ಕಂಡುಕೊಂಡ ಅಂಶ. ‘ಇವೆರಡು ಬೆರಳುಗಳ ನಡುವಿನ ನೀಳ ಭ್ರೂಣಾವಸ್ಥೆಯಲ್ಲೇ ಟೆಸ್ಟೋಸ್ಟೆರೋನ್ ಎಂಬ ನೈಸರ್ಗಿಕ ಸ್ಟಿರಾಯ್ಡ್ ಹಾರ್ಮೋನ್ ನಿಂದ ನಿರ್ಧಾರವಾಗುತ್ತದೆ. ಭ್ರೂಣಾವಸ್ಥೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ನೈಸರ್ಗಿಕ ಸ್ಟಿರಾಯ್ಡ್ ಬಿಡುಗಡೆಯಾದಷ್ಟು ನಮ್ಮ ಬೆರಳುಗಳು ನೀಳವಾಗುತ್ತದೆ.
ಈ ಸ್ಟಿರಾಯ್ಡ್ ಹಾರ್ಮೋನ್ ನಮ್ಮ ಕ್ರೀಡೆ, ಫಿಟ್ ನೆಸ್ ಮತ್ತು ಅಥ್ಲೆಟಿಕ್ ಕ್ರಿಯೆಗಳನ್ನು ಉತ್ತೇಜಿಸುತ್ತವೆ. ತೋರು ಬೆರಳು ಮತ್ತು ಪವಿತ್ರ ಬೆರಳುಗಳ ನಡುವಿನ ಈ ಡಿಜಿಟ್ ರೇಷಿಯೋ ನಮ್ಮಲ್ಲಿ ಕ್ರೀಡಾ ಸಾಮರ್ಥ್ಯವನ್ನು ನಿರ್ಧರಿಸುತ್ತದೆ’ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ