ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಆಗಸ್ಟ್ 5ರಂದು ಕಲಬುರಗಿ ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಲಬುರಗಿ ನಗರದಲ್ಲಿ ಆಗಸ್ಟ್ 4 ರ ಮಧ್ಯಾಹ್ನ 3 ರಿಂದ ಆಗಸ್ಟ್ 6ರ ಬೆಳಗಿನ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಲ್ಲದೇ ಮದ್ಯ ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ಕಲಬುರಗಿ ನಗರದ ಪೊಲೀಸ್ ಆಯುಕ್ತರಾದ ಎನ್. ಸತೀಶಕುಮಾರ ಆದೇಶ ಹೊರಡಿಸಿದ್ದಾರೆ.