ಬೆಂಗಳೂರು: ರಾತ್ರಿ ಮಲಗುವಾಗ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುತ್ತಾರೆ. ಅಷ್ಟಕ್ಕೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏನಾಗುತ್ತದೆ ಗೊತ್ತಾ?
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ದುಸ್ವಪ್ನದ ಜತೆಗೆ ನಿದ್ರಾಹೀನತೆ ಸಮಸ್ಯೆಯೂ ಬರಬಹುದು. ಗಣಪತಿಗೆ ಆನೆಯ ಮುಖ ಬರುವ ಕತೆ ಕೇಳಿಲ್ಲವೇ? ಗಣೇಶನ ತಲೆಗೆ ಜೋಡಿಸಲು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯೇ ಆಗಬೇಕೆಂದು ಶಿವ ಆದೇಶಿಸಿದ್ದ. ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಉತ್ತಮ. ವೈಜ್ಞಾನಿಕವಾಗಿ ನಮ್ಮ ಭೂಮಿ ತಿರುಗುವ ಪ್ರಕ್ರಿಯೆಗೆ ಅನುಗುಣವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಶ್ರೇಯಸ್ಕರವಲ್ಲ ಎನ್ನಲಾಗುತ್ತದೆ.