ಬೆಂಗಳೂರು: ಸರ್ಪದೋಷ ಬಂದಾಗ ನಾವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಸೇವೆ ಸಲ್ಲಿಸಿದರೆ ಅದು ಸರಿ ಹೋಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಆದರೆ ಸರ್ಪದೋಷ ಯಾವಾಗ ಬರುತ್ತದೆ ಗೊತ್ತಾ?
ನಾಗದೇವತೆಗೆ ಹಾನಿಯುಂಟಾಗುವ ಪ್ರಸಂಗಗಳು, ಅಪಚಾರ ತರುವ ಸಂಗತಿಗಳು, ನಮಗೆ ತಿಳಿದೋ ತಿಳಿಯದೆಯೋ ನಾಗನಿಗೆ, ಅದರ ಮೊಟ್ಟೆಗೆ ಅಥವಾ ಅದರ ಹುತ್ತಕ್ಕೆ ಹಾನಿ ಮಾಡಿದಾಗ, ಬೆತ್ತದಿಂದ ಹೊಡೆದಾಗ ಸರ್ಪದೋಷ ಉಂಟಾಗುತ್ತದೆ.
ಇದರಿಂದಾಗಿ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕಷ್ಠಾದಿ ರೋಗಗಳು, ವಿವಾಹಕ್ಕೆ ಅಡ್ಡಿ ವ್ಯವಹಾರದಲ್ಲಿ ನಷ್ಟ, ಕೃಷಿಗೆ ಸಂಕಷ್ಟ ಎದುರಾಗುತ್ತವೆ. ಹೀಗಾಗಿ ಸರ್ಪದೇವತೆಯ ಆರಾಧನೆ ಮಾಡುವುದು ಮುಖ್ಯವಾಗಿದೆ.