Webdunia - Bharat's app for daily news and videos

Install App

ಶನಿ ಕಾಟ: ಯಾವ ಯಾವ ರಾಶಿ ಮೇಲೆ ಎಷ್ಟೆಷ್ಟು? ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳೋದು ಹೇಗೆ?

Webdunia
ಶನಿವಾರ, 15 ಅಕ್ಟೋಬರ್ 2016 (14:57 IST)
ವೃಷಭ, ಮಕರ ರಾಶಿ ಕೆಟ್ಟ ದೃಷ್ಟಿಯಿಂದ ಬಚವಾದರೆ, ಕರ್ಕ ರಾಶಿ ಸಾಡೇಸಾತಿಯಿಂದ ಮುಕ್ತಿ ಪಡೆದಿದೆ. ತುಲಾ, ಮಿಥುನ ಹಾಗೂ ಕುಂಭ ರಾಶಿಗೆ ಈಗ ಆರಂಭವಾಗಿದೆ. ಹೀಗೆ ಯಾವ್ಯಾವ ರಾಶಿಗಳಲ್ಲಿ ಜನಿಸಿದವರ ಮೇಲೆ ಶನಿಯ ವಕ್ರದೃಷ್ಟಿ ಬೀರುತ್ತದೆ ಎಂಬ ಬಗ್ಗೆ ನೋಡೋಣ.
ಮೇಷ: ಮೇಷ ರಾಶಿಗೆ ಈಗ ಶನಿ ಸ್ವಾಸ್ಥ್ಯ ನೀಡುತ್ತಾನೆ. ಅಷ್ಟೇ ಅಲ್ಲ, ಧನಲಾಭವನ್ನೂ ಕೂಡಾ. ಆದರೆ ಚಿಂತೆಯನ್ನೂ ಇದೇ ಲಾಭಕಾರಕ ಶನಿ ಈ ರಾಶಿಯವರಿಗೆ ನೀಡುತ್ತಾನೆ. ಕುಟುಂಬ, ಸಂತಾನ ಹಾಗೂ ವ್ಯಾಪಾರ, ನೌಕರಿ ಸಂಬಂಧ ಚಿಂತೆ ಹೆಚ್ಚುತ್ತದೆ.
 
 
ವೃಷಭ: ಸಮಸ್ಯೆಗಳಿಂದ ಮುಕ್ತಿ ದೊರೆತರೂ, ಸ್ತ್ರೀ ಪುತ್ರರ ಸ್ವಾಸ್ಥ್ಯಕ್ಕೆ ಕಷ್ಟ ಸಾಧ್ಯತೆಗಳಿವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭವೂ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ.
 
 
ಮಿಥುನ: ಈ ರಾಶಿಯವರಿಗೆ ಈಗ ಶನಿ ತುಂಬ ಪೀಡಾಕಾರಕನಾಗಿರುತ್ತಾನೆ. ಕುಟುಂಬ ಕಲಹ, ಸಹೋದರರೊಂದಿಗೆ ಮನಸ್ತಾಪ, ಪ್ರವಾಸದಿಂದ ಕಷ್ಟ, ಚಿಂತೆ ಇವೆಲ್ಲ ತೊಂದರೆಗಳು ಸಂಭವಿಸುತ್ತದೆ. ವೃತ್ತಿ ಜೀವನದಲ್ಲೂ ಈ ರಾಶಿಯವರು ತುಂಬ ಜಾಗರೂಕರಾಗಿರಬೇಕು.
 
ಕರ್ಕ: ಈ ರಾಶಿಯವರಿಗೆ ಉತ್ತಮ ಸಮಯ. ಪರಾಕ್ರಮ ವೃದ್ಧಿ, ಶತ್ರು ವಿಜಯ, ಧನಲಾಭ, ಉದ್ಯೋಗದಲ್ಲಿ ಬಡ್ತಿ ಅಥವಾ ಸ್ಥಾನಾಂತರ (ಟ್ರಾನ್ಸ್‌ಫರ್) ಸಾಧ್ಯತೆಗಳನ್ನು ಶನಿ ತರುತ್ತಾನೆ. ಆದರೆ ನಿಮಗೆ ಶನಿ ಶುಭಕಾರಕನು.
 
 
ಸಿಂಹ: ತುಂಬ ಕಷ್ಟನಷ್ಟಗಳಿದ್ದರೂ ಧನಲಾಭದ ಯೋಗವಿದೆ. ಸಣ್ಣ ಪುಟ್ಟ ಗಾಯಗಳಾಗುವ, ಅಫಘಾತಗಳಾಗುವ ಭಯವಿದೆ. ಹಾಗಾಗಿ ಜಾಗ್ರತೆ ಅಗತ್ಯ. ನೌಕರಿಯ್ಲಲೂ ಕಷ್ಟನಷ್ಟಗಳ ಸಾಧ್ಯತೆಯಿದೆ. ಯಾವುದಾದರೂ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ.
 
 
ಕನ್ಯಾ: ಆಲಸ್ಯ, ಮಾನಸಿಕ ಚಿಂತೆ ಈ ರಾಶಿಯವರಿಗೆ ಈಗ ಸಾಮಾನ್ಯ. ಧನಹಾನಿಯಾಗುವ ಸಂಭವವಿದೆ. ತುಂಬ ವಾದ ವಿವಾದಗಳಲ್ಲಿ ತೊಡಗಿ ಮಾನಸಿಕ ಚಿಂತೆ ಹುಟ್ಟುತ್ತದೆ. ಈ ರಾಶಿಯವರು ಈಗ ತುಂಬ ಸಾವಧಾನಿಗಳಾಗಿ ಸಮಾಧಾನ ಚಿತ್ತರಾಗಿರುವುದು ಉತ್ತಮ.
 
 
ತುಲಾ: ತುಲಾರಾಶಿಗೆ ಈಗ ಸಾಡೇಸಾತಿ (ಏಳುವರೆ) ಶನಿ ದೆಶೆ ಆರಂಭ. ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದವರ ಶ್ರಮ, ಕಷ್ಟಗಳು ಹೆಚ್ಚುತ್ತವೆ. ಆದರೆ ವಾಹನ ಯೋಗ, ಧನಲಾಭ ಮುಂತಾದ ಸುಖಭೋಗಗಳಿಗೆ ಕೊರತೆಯಿರುವುದಿಲ್ಲ. 
 
 
ವೃಶ್ಚಿಕ: ಈ ರಾಶಿಯವರಿಗೆ ಈಗ ಉತ್ತಮ ಸಮಯ. ಮಾನ, ಸಮ್ಮಾನ, ಪ್ರತಿಷ್ಠೆ ಹೆಚ್ಚುತ್ತದೆ. ಧನಲಾಭವೂ ಕೂಡಾ ಇದೆ. ವಾಹನ, ಯಂತ್ರಗಳಿಂದ ಲಾಭವಿದೆ. ಮಾನಸಿಕ ಕಷ್ಟನಷ್ಟಗಳೆಲ್ಲ ದೂರವಾಗುತ್ತದೆ.
 
ಧನು: ಧನಲಾಭ, ಆರ್ಥಿಕ ಅನುಕೂಲತೆಗಳಿದ್ದರೂ ಖರ್ಚೂ ಹೆಚ್ಚುತ್ತದೆ. ಶ್ರಮ ಹೆಚ್ಚಿದರೂ, ಸ್ತಾನಪಲ್ಲಟವಾಗುವ ಸಾಧ್ಯತೆಯಿದೆ. ಉದರ ಸಂಬಂಧೀ ರೋಗಗಳ ಭಯವಿರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
 
ಮಕರ: ಚಿಂತೆ ನಿಮಗೀಗ ಸಾಮಾನ್ಯ. ಕಾರ್ಯ ಸಫಲತೆಗೆ ತುಂಬ ಶ್ರಮ ಪಡಬೇಕಾಗುತ್ತದೆ. ಶಾರೀರಿಕ ಶ್ರಮ ಹೆಚ್ಚುತ್ತದೆ. ವಾಹನ ಚಲಾಯಿಸುವವರು ತುಂಬ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು.
 
ಕುಂಭ: ಸ್ವರಾಶಿಯಾಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಶನಿಯಿಂದ ತೊಂದರೆ ಕಡಿಮೆ, ಅನುಕೂಲತೆಗಳೇ ಹೆಚ್ಚು. ಸುಖ ಸಮೃದ್ಧಿ ಹೆಚ್ಚುತ್ತದೆ. ಆದರೂ ಶನಿಯ ಪ್ರಭಾವದಿಂದ ಜೀವನ ಸ್ವಲ್ಪ ಅಸ್ತವ್ಯಸ್ಥವಾಗುವ ಸಂಭವವಿದೆ. ತುಂಬ ರಿಸ್ಕ್ ತೆಗೆದುಕೊಳ್ಳುವುದು ಬೇಡ. 
 
ಮೀನ: ಮಾನಸಿಕ ಕ್ಲೇಷ ಹಾಗೂ ತುಂಬ ಭಾಗ್ಯದೋಷಗಲಿದ್ದರೂ, ಶನಿ ಿಮಗೆ ಧನಲಾಭ ನೀಡುತ್ತಾನೆ. ವ್ಯರ್ಥ ಚಿಂತೆ ಮಾಡುವುದು ನಿಮಗೆ ಈಗ ಅಗತ್ಯವಿಲ್ಲ. ದೂರ ಪ್ರಯಾಣ ಮಾಡುವ ಸಂಭವವಿದೆ. ಆದರೆ ಹಣ ವ್ಯಯ ಮಾಡುವ ಸಂದರ್ಭ ಯೋಚಿಸಿ, ಲೆಕ್ಕಾಚಾರ ಹಾಕಿ ಖರ್ಚು ಮಾಡುವುದು ಉತ್ತಮ.
 
ಶನಿಯ ವಿಶೇಷತೆಗಳು: 
 
1. ಏಳುವರೆ ಶನಿ (ಸಾಡೇಸಾತಿ) ಏಳುವರೆ ವರ್ಷಗಳಲ್ಲಿ ಸುಮಾರು 46 ತಿಂಗಳ ಕಾಲ ಶುಭ ಹಾಗೂ ಉನ್ನತಿದಾಯಕನೂ ಆಗಿರುತ್ತಾನೆ. ಉಳಿದ ತಿಂಗಳುಗಳಲ್ಲಿ ಸಾಡೇಸಾತಿ ಶನಿದೆಶೆ ಇರುವವರು ತುಂಬ ಜಾಗರೂಕರಾಗಿದ್ದರೆ ಅಪಾಯಗಳಿಂದ, ಕಷ್ಟಗಿಂದ ತಪ್ಪಿಸಿಕೊಳ್ಳಬಹುದು.
 
2. ಕುಂಡಲಿಯಲ್ಲಿ ಶನಿ 3, 6, 11 ಅಥವಾ 5, 9 ಸ್ಥಾನಗಳಲ್ಲಿದ್ದರೆ ತ್ರಿಕೋಣೇಶ ಅಥವಾ ಲಗ್ನೇಶನಾಗಿದ್ದರೆ ಶನಿಯ ಶುಭ ಪ್ರಭಾವ ಹೆಚ್ಚು.
 
3. ಶನಿಯ ಪ್ರತಿಕೂಲ ಸ್ಥಿತಿಯಲ್ಲಿ ಅರ್ಥಾತ್ ಶನಿದೆಶೆಯಲ್ಲಿದ್ದಾಗ ಆ ರಾಶಿಯಲ್ಲಿ ಜನಿಸಿದವರು ಶನಿಗೆ ಎಳ್ಳೆಣ್ಣೆ ದಾನ ಮಾಡಿದರೆ, ಅಥವಾ ಹನುಮಂತನ ಉಪಾಸನೆ ಮಾಡುವುದರಿಂದ, ಶನಿಯ ಸ್ತೋತ್ರ ಪಠಣ ಮಾಡುವುದರಿಂದ ಹಾಗೂ ಕಪ್ಪು ನಾಯಿಯ ಸೇವೆ ಮಾಡುವುದರಿಂದ ಶನಿಯ ಕೆಟ್ಟ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು.
 
4. ವ್ಯಕ್ತಿ ನಿಯಮಬದ್ಧನಾಗಿದ್ದರೆ, ಸಂಸ್ಕಾರಶೀಲನಾಗಿದ್ದರೆ, ಮಾಂಸ- ಮದಿರೆಗಳಿಂದ ದೂರವಿದ್ದರೆ, ಜನರಿಗೆ ಸಹಾಯ ಮಾಡುತ್ತಿದ್ದರೆ, ಸ್ತ್ರೀಯರ ಮೇಲೆ ಗೌರವವಿದ್ದರೆ, ಪ್ರಾಮಾಣಿಕನಾಗಿದ್ದರೆ ಅಂಥ ವ್ಯಕ್ತಿಗಳಿಗೆ ಶನಿದೇವನು ಕಷ್ಟಕೋಟಲೆಗಳನ್ನು ನೀಡುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಂಜನೇಯನ ಈ ಮಂತ್ರವನ್ನು ಪಠಿಸಿದರೆ ಕಷ್ಟಗಳು ನಿವಾರಣೆಯಾಗಿ ಯಶಸ್ಸು ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಮುಂದಿನ ಸುದ್ದಿ