ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ದೂರವಾಗಬಹುದು.
ಉಪ್ಪು ದಾನ ಮಾಡಿದವರು ಚಿತ್ರಗುಪ್ತನೇ ಮೊದಲುಗೊಂಡು ಇಡೀ ಯಮನ ಪರಿವಾರವನ್ನು ತೃಪ್ತಿಪಡಿಸಿದಂತಾಗುತ್ತದೆ. ಭತ್ತ, ಗೋಧಿ, ಹೆಸರು, ಉದ್ದು, ಅರಿಶಿನ, ಕಡಲೆ, ಜವೆ, ಈ ಧಾನ್ಯಗಳ ದಾನದಿಂದ ಸೌಮ್ಯ ಸೌರಿಪುರ, ಮೊದಲಾದ ನಗರಗಳ ದ್ವಾರದಲ್ಲಿರುವ ಪಾಲಕರು ತೃಪ್ತರಾಗುವರು.
ಇನ್ನು ಕೊಡೆ, ಪಾದರಕ್ಷೆ, ವಸ್ತ್ರ, ಮುದ್ರಿಕೆ, ಕಮಂಡಲು, ಪೀಠ, ಪಂಚಪಾತ್ರೆ, ತಾಮ್ರಪತ್ರೆ, ಅಕ್ಕಿ, ದನ, ಜನಿವಾರ ಹೀಗೆ ಒಂದೊಂದು ದಾನದಿಂದ ಒಂದೊಂದು ರೀತಿಯ ಫಲವನ್ನು ಪಡೆಯುತ್ತಾ ಹೋಗುತ್ತಾನೆ.