ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೇ ಆತ್ಮರತಿ ಮಾಡುವುದು ಚಟವಾಗಿ ಬಿಟ್ಟರೆ ಉಳಿದ ಕೆಲಸಗಳಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಇದರಿಂದ ಹೊರಬರುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಟಿಪ್ಸ್.
ಅತಿಯಾಗಿ ಆತ್ಮರತಿ ಮಾಡುತ್ತಿದ್ದರೆ ಅದನ್ನು ನಿಲ್ಲಿಸಲು ನಿಮ್ಮ ಮನಸ್ಸನ್ನು ಬೇರೆ ಹವ್ಯಾಸದ ಕಡೆಗೆ ತೊಡಗಿಸಿಕೊಳ‍್ಳುವುದು ಉತ್ತಮ. ಉದಾಹರಣೆಗೆ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಆತ್ಮರತಿ ಮಾಡದೇ ನಿದ್ರೆಯೇ ಬರದು ಎಂದಿದ್ದರೆ ಉತ್ತಮ ಪುಸ್ತಕ ಓದುವುದನ್ನು ಹವ್ಯಾಸ ಮಾಡಿಕೊಳ್ಳಿ. ಇದರಿಂದ ಬೇಗನೇ ನಿದ್ರೆ ಹತ್ತುತ್ತದೆ.
ಇನ್ನು, ಲೈಂಗಿಕ ವಿಚಾರಗಳನ್ನು ನೋಡುವುದು, ಓದುವುದು, ಪೋರ್ನ್ ಸಿನಿಮಾ ನೋಡುವುದು, ಫೋಟೋ ವೀಕ್ಷಿಸುವುದು ಇತ್ಯಾದಿಗಳನ್ನು ನಿಧಾನವಾಗಿ ನಿಲ್ಲಿಸಿ. ಲೈಂಗಿಕ ಭಾವನೆ ಕೆರಳಿಸುವ ವಿಚಾರಗಳಿಂದ ಹೊರಬರಲು ಬೇರೆಯವರೊಂದಿಗೆ ಉತ್ತಮ ವಿಚಾರಗಳ ಬಗ್ಗೆ ಮಾತನಾಡಿ. ಹಾಗೆಯೇ ದೇಹಕ್ಕೆ ವ್ಯಾಯಾಮ ಒದಗಿಸುವ ದೈಹಿಕ ಕಸರತ್ತು ಮಾಡಿ. ಆದಷ್ಟು ಯೋಗ ಧ್ಯಾನ ಮಾಡಿದರೂ ಉತ್ತಮ. ಇದರಿಂದ ನಿಮ್ಮ ಮನಸ್ಸು ಬೇರೆ ಕಡೆಗೆ ವಾಲುತ್ತದೆ. ಆತ್ಮರತಿ ಯೋಚನೆ ಬಂದಾಗಲೆಲ್ಲಾ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಿ.