ಬೆಂಗಳೂರು: ಗುರುವಾರವೆಂದರೆ ಗುರು ರಾಘವೇಂದ್ರರ ದಿನ. ಈ ದಿನ ರಾಯರನ್ನು ಭಕ್ತಿಯಿಂದ ಬೇಡಿಕೊಂಡರೆ ಬೇಡಿದ ವರವನ್ನು ಕರುಣಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಆ ದಿನ ಹೇಗೆ ಪೂಜೆ ಮಾಡಬೇಕು ಗೊತ್ತಾ?
ಗುರುವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಶುದ್ಧ ತುಪ್ಪದಿಂದ ಐದು ದೀಪಗಳನ್ನು ಹಚ್ಚಿ ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಆರತಿ ಮಾಡಿ ನಂತರ ಅದನ್ನು ರಾಯರ ಬಲಭಾಗಕ್ಕೆ ಸೇರುವಂತೆ ಇಟ್ಟು ಬನ್ನಿ. ಸತತ ಐದು ಗುರುವಾರ ಹೀಗೆ ಮಾಡುತ್ತಾ ಬಂದರೆ ನೀವು ಅಂದುಕೊಂಡಿದ್ದು ನೆರವೇರುತ್ತದೆ.
ಅದೇ ರೀತಿ ರಾಯರ ಮಠಕ್ಕೆ ಹೋದರೆ ಒಂದು ಬದಿಯಲ್ಲಿ ನಿಂತು ರಾಯರನ್ನು ನೇರವಾಗಿ ನೋಡುತ್ತಾ ಭಕ್ತಿಯಿಂದ ಕೈ ಮುಗಿದು ರಾಯರೇ ನನ್ನ ಜೀವನದ ಬಗ್ಗೆ ನಿಮಗೆ ಗೊತ್ತು, ನಾನು ಯಾವ ಕಷ್ಟದಿಂದ ಬಳಲುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿದಿದೆ. ಕೆಲವು ತಪ್ಪುಗಳನ್ನು ಮಾಡಿರುವೆ. ಕ್ಷಮಿಸಿ, ಮುನ್ನಡೆಸು ಎಂದು ಭಕ್ತಿಯಿಂದ ಬೇಡಿಕೊಳ್ಳಿ.