ಬೆಂಗಳೂರು: ಯಾವುದೇ ಶುಭ ಕಾರ್ಯಕ್ಕೆ ತೊಡಗಬೇಕಾದರೂ ಶುಭ ಮುಹೂರ್ತ ನೋಡಿ ಮುಂದುವರಿದರೆ ಕೆಲಸ ಸುಗಮವಾಗುತ್ತದೆ ಎಂಬ ನಂಬಿಕೆಯಿದೆ. ಶುಭ ಮುಹೂರ್ತ ಲೆಕ್ಕ ಹಾಕುವುದಕ್ಕೆ ಜ್ಯೋತಿಷಿಗಳೇ ಬೇಕಿಲ್ಲ. ನೀವೇ ಲೆಕ್ಕ ಹಾಕಬಹುದು. ಅದು ಹೇಗೆ? ತುಂಬಾ ಸುಲಭ ಇಲ್ಲಿ ನೋಡಿ.
ಜನ್ಮ ನಕ್ಷತ್ರದಿಂದ ಆರಂಭಿಸಿ ನಿರ್ದಿಷ್ಟ ಶುಭ ಕಾರ್ಯ ಮಾಡುವ ದಿನದ ನಕ್ಷತ್ರದವರೆಗೆ ಎಣಿಸಬೇಕು. ಬಂದ ಸಂಖ್ಯೆಯನ್ನು ಆ ನಂತರ ಒಂಭತ್ತರಿಂದ ಭಾಗಿಸಬೇಕು. ಭಾಗಿಸಿದ ನಂತರ ಉಳಿದ ಶೇಷ ಸಂಖ್ಯೆಯ ಆಧಾರದಲ್ಲಿ ಶುಭ ಕಾರ್ಯ ಮಾಡಬಹುದೋ ಬೇಡವೋ ಎಂದು ನಿರ್ಧರಿಸಬಹುದು.
ಇನ್ನು, ಮಂಗಳವಾರ, ಶನಿವಾರಗಳಂದು ವಾರ ದೋಷ ಎಂಬ ಕಾರಣಕ್ಕೆ ಶುಭ ಕಾರ್ಯಗಳನ್ನು ಆರಂಭಿಸುವುದಿಲ್ಲ. ಅದೇ ರೀತಿ ಹುಣ್ಣಿಮೆ, ಅಮವಾಸ್ಯೆ, ನವಮಿ, ಅಷ್ಟಮಿ, ಪಾಡ್ಯ ತಿಥಿಗಳಂದು ಆಷಾಢ, ಧನುರ್ಮಾಸ ಮತ್ತು ಗ್ರಹಗಳ ಅಸ್ತ ಕಾಲದಲ್ಲೂ ಶುಭ ಕಾರ್ಯ ಮಾಡಬಾರದು.
ನಿಮ್ಮ ನಕ್ಷತ್ರಗಳ ಪಾಲಿಗೆ ಸಾಧಕ ತಾರೆ, ಸಂಪತ್ತಾರೆ, ಕ್ಷೇಮ ತಾರೆ, ಪರಮೈತ್ರ ತಾರೆ ಯಾವುದೆಂದು ತಿಳಿದು ಆ ನಕ್ಷತ್ರಗಳು ಇರುವ ದಿನ ಕಾರ್ಯಾರಂಭ ಮಾಡಿ. ನಿಮ್ಮ ನಕ್ಷತ್ರಗಳು ಜನ್ಮ ನಕ್ಷತ್ರದಿಂದ ಎಣಿಸಿದಾಗ ವಿಪತ್ತು, ಪ್ರತ್ಯೇಕ ಅಥವಾ ವಧ ತಾರೆ ಆಗಬಾರದು.
ಹಾಗಿದ್ದರೂ ಅದೇ ಅಂತಹ ದಿನಗಳಲ್ಲೇ ಶುಭ ಕಾರ್ಯ ಮಾಡಬೇಕಿದ್ದರೆ, ವಿಪತ್ತು ತಾರೆ ಆಗಿದ್ದಲ್ಲಿ ಬೆಲ್ಲ, ಪ್ರತ್ಯೇಕ ತಾರೆ ಆಗಿದ್ದಲ್ಲಿ ಉಪ್ಪು ಹಾಗೂ ವಧ ತಾರೆ ಆಗಿದ್ದಲ್ಲಿ ಎಳ್ಳು ಅಥವಾ ವಸ್ತ್ರ ದಾನ ಮಾಡಿ ದೋಷ ಪರಿಹಾರ ಮಾಡಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ