ಬೆಂಗಳೂರು: ಹೆಚ್ಚಾಗಿ ದಾನ, ದಕ್ಷಿಣೆ ಕೊಡುವಾಗ ತೆಂಗಿನ ಕಾಯಿ, ಬಾಳೆ ಹಣ್ಣು, ತುಳಸಿ ಜತೆ ವೀಳ್ಯದೆಲೆ, ಅಡಿಕೆಯನ್ನೂ ಇಟ್ಟುಕೊಡುತ್ತೇವೆ.
ಆದರೆ ಹೀಗೆ ವೀಳ್ಯದೆಲೆ ಕೊಡುವಾಗ ಅದನ್ನು ಒಣಗಿದ್ದರೆ ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ ಎಂದರ್ಥ. ನೀವು ಕೈ ಹಿಡಿದ ಕಾರ್ಯಗಳು ಅರ್ಧಕ್ಕೇ ನಿಲ್ಲುತ್ತವೆ ಎಂದರ್ಥ.
ಅಲ್ಲದೆ ವೀಳ್ಯದೆಲೆ ಇಲ್ಲದೇ ದಾನ ಕೊಟ್ಟರೆ ಅದರ ಫಲ ಸಿಗದು. ಬದಲಾಗಿ ಆ ಶುಭ ಕಾರ್ಯಕ್ಕೆ ವಿಘ್ನಗಳು ಎದುರಾಗಬಹುದು. ಹಣಕಾಸಿಗೆ ತೊಂದರೆಯಾಗಬಹುದು. ಇನ್ನು, ತಾಂಬೂಲವನ್ನು ದೇವರಿಗೆ ಅರ್ಪಿಸದೇ ಮೂಲೆಯಲ್ಲಿಟ್ಟರೆ ಸಮಾಜದಲ್ಲಿ ಗೌರವ ಕಳೆದುಕೊಳ್ಳಬೇಕಾಗುತ್ತದೆ. ಹಾಗೇ ಅದನ್ನು ಪಡೆದವರು ಬಿಟ್ಟು ಬಂದರೆ ವಿವಾಹ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳಿಗೂ ತೊಂದರೆಯಾಗುತ್ತದೆ.