ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸುದೀರ್ಘ ಕಾಲದಿಂದ ಕಾಡುತ್ತಿದ್ದ ಸಾಂಸಾರಿಕ ಸಮಸ್ಯೆಗೆ ಇಂದು ಪರಿಹಾರ ಸಿಕ್ಕಿ ನೆಮ್ಮದಿ ಕಾಣುವಿರಿ. ಮೇಲಧಿಕಾರಿಗಳೊಂದಿಗೆ ವರ್ತಿಸುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಶುಭ ದಿನ.
ವೃಷಭ: ಧನ ಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿದ್ದರೆ ಯಶಸ್ಸು ಸಾಧ್ಯ.
ಮಿಥುನ: ವ್ಯಾಜ್ಯ ವಿಚಾರವಾಗಿ ನ್ಯಾಯಕ್ಕಾಗಿ ಓಡಾಡಬೇಕಾದೀತು. ಪ್ರಯತ್ನದಿಂದ ಯಶಸ್ಸು ಸಾಧ್ಯ. ಅಂದುಕೊಂಡ ಫಲ ಸಿಗದಿದ್ದರೆ ನಿರಾಸೆ ಬೇಡ.
ಕರ್ಕಟಕ: ದೇವತಾ ಕಾರ್ಯಗಳನ್ನು ಕೈಗೊಳ್ಳುವಿರಿ. ದೇವರ ಅನುಗ್ರಹದೊಂದಿಗೆ ಉದ್ದೇಶಿತ ಕಾರ್ಯ ಸಾಧುವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
ಸಿಂಹ: ಇತಿ ಮಿತಿಯಲ್ಲಿ ಖರ್ಚು ಮಾಡಿ. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ. ದೂರ ಸಂಚಾರ ಮಾಡಬೇಕಾಗಿ ಬರಬಹುದು, ಎಚ್ಚರವಿರಲಿ.
ಕನ್ಯಾ: ಹೊಸ ವಸ್ತುಗಳ ಖರೀದಿ ಮಾಡುವಿರಿ. ಸಾಂಸಾರಿಕವಾಗಿ ಬೆಂಬಲ ಸಿಗುವುದು. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ, ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ: ಸಾಲ ಕೊಡುವ ಮುನ್ನ ಯೋಚಿಸಿ. ಸುತ್ತಮುತ್ತಲಿನವರಿಂದ ಮೋಸ, ವಂಚನೆಗೊಳಗಾಗುವ ಸಾಧ್ಯತೆಯಿದೆ.
ವೃಶ್ಚಿಕ: ಸ್ವಯಂ ತಪ್ಪುಗಳಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ವೃತ್ತಿ ಜೀವನದಲ್ಲಿ ಕಠಿಣ ಪರಿಶ್ರಮ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.
ಧನು: ದಾಂಪತ್ಯ ಸುಖ ಅನುಭವಿಸುವಿರಿ. ದೂರ ಸಂಚಾರ ಮಾಡುವ ಸಾಧ್ಯತೆಯಿದೆ. ಅಂದುಕೊಂಡ ಕಾರ್ಯಗಳು ನೆರವೇರಿ ಸಂತಸದ ದಿನ ನಿಮ್ಮದಾಗಲಿದೆ.
ಮಕರ: ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿ. ವಂಚನೆಗೊಳಗಾಗುವ ಸಾಧ್ಯತೆಯಿದೆ. ವೃತ್ತಿಯಲ್ಲಿ ಮೇಲ್ವರ್ಗದವರಿಂದ ಕಿರಿ ಕಿರಿ ಇರುತ್ತದೆ.
ಕುಂಭ: ನಿಮ್ಮ ನಾಲಿಗೆ ಇಂದು ನಿಮ್ಮ ಹಿಡಿತದಲ್ಲಿದ್ದರೆ ಒಳಿತು. ಬಾಯಿ ತಪ್ಪಿ ಆಡುವ ಮಾತಿನಿಂದ ನಿಷ್ಠುರರಾಗುವ ಸಂಭವವಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ಮೀನ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಸಾಧ್ಯತೆಯಿದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.