ಬೆಂಗಳೂರು : ಇಂದು ನವರಾತ್ರಿಯ 8ನೇ ದಿನ. ಈ ದಿನ ಮಹಾ ಗೌರಿ ದೇವಿಯನ್ನು ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಇಂದು ಗಣೇಶನ ಪೂಜೆ ಮಾಡಿ ಬಳಿಕ ಮಹಾಗೌರಿಯನ್ನು ಪೂಜಿಸಿದರೆ ವಿಶೇಷ ಫಲ ದೊರೆಯುತ್ತದೆ. ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಕೆಂಪು ಅಥವಾ ಹಳದಿ ಬಣ್ಣದ ಹಾಗೂ ಪಾರಿಜಾತ ಹೂಗಳಿಂದ ಅಲಂಕಾರವನ್ನು ಮಾಡಿ. ಹಾಗೇ ದೇವಿಗೆ ಪೂಜೆ ಮಾಡುವಾಗ ಕೆಂಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ ದೇವಿಗೆ ಪೂಜೆ ಮಾಡಿ. ಇಂದು 9 ಕನ್ಯೆಯರ ಪೂಜೆ ಮಾಡಿ ದಾನ ನೀಡಿದರೆ ಸಂತಾನ ದೋಷ ನಿವಾರಣೆಯಾಗುತ್ತದೆ.
ನೀವು ಇಂದು ದೇವಿಗೆ ತೆಂಗಿನಕಾಯಿಯಿಂದ ಮಾಡಿದ ಸಿಹಿ ಪಾಯಸವನ್ನು ನೈವೇದ್ಯವಾಗಿ ಇಟ್ಟರೆ ಮಹಾಗೌರಿ ದೇವಿಯ ಅನುಗ್ರಹವಾಗುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಮಹಾಗೌರಿ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.