Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?
ಬೆಂಗಳೂರು , ಶನಿವಾರ, 20 ಜನವರಿ 2018 (07:26 IST)
ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ಕ್ಷೇಮ, ಸುಖಕ್ಕಾಗಿ ಕುಂಕುಮ ಇಡುತ್ತಾರೆ. ಭಕ್ತರು ದೇವರಿಗೆ ಪೂಜೆ ಮಾಡುವಾಗ, ದರ್ಶನ ಪಡೆದ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಿರಿಯರು ಆರ್ಶೀರ್ವಾದ ಮಾಡುವಾಗ ಕುಂಕುಮವಿಡುವುದು ವಾಡಿಕೆ. ಹಾಗೆ ಕುಂಕುಮವನ್ನು ಯಾವ ಬೆರಳಲ್ಲಿಇಟ್ಟರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.


ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿಗ್ರಹದ ಸ್ಥಾನವಾದ್ದರಿಂದ ಆ ಬೆರಳಲ್ಲಿ ಕುಂಕುಮವಿಟ್ಟರೆ ಆ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆಯಂತೆ. ಉಂಗುರದ ಬೆರಳು ಸೂರ್ಯ ಸ್ಥಾನವಾದ್ದರಿಂದ ಈ ಬೆರಳಲ್ಲಿ ತಿಲಕವನಿಟ್ಟರೆ ಮನಸ್ಸಿಗೆ ನೆಮ್ಮದಿ ಸಿಕ್ಕಿ ಮನಸ್ಸು ಪ್ರಶಾಂತವಾಗಿರುತ್ತದೆಯಂತೆ. ಹಾಗೆ ಹೆಬ್ಬೆರಳಲ್ಲಿ ತಿಲಕವನಿಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ದೊರೆಯುತ್ತದೆ. ಯಾಕೆಂದರೆ ಈ ಬೆರಳು ಶುಕ್ರನ ಸ್ಥಾನವಾದ್ದರಿಂದ ಆತ ನಮಗೆ ಅಪಾರ ಶಕ್ತಿ ಹಾಗು ಆರೋಗ್ಯವನ್ನು  ನೀಡುತ್ತಾನೆ. ತೋರು ಬೆರಳಲ್ಲಿ ಕುಂಕುಮವನಿಟ್ಟರೆ ಮೋಕ್ಷ ಲಭಿಸುತ್ತದೆಯಂತೆ. ಯಾಕೆಂದರೆ ಅದು ಗುರುವಿನ ಸ್ಥಾನವಾದ್ದರಿಂದ ಸಮಸ್ಯೆಯಿಂದ ಹೊರಗೆ ತರುವುದರ ಜೊತೆಗೆ ನಮಗೆ ಮೋಕ್ಷ ಉಂಟುಮಾಡುತ್ತಾನಂತೆ.


ನಮ್ಮ ದೇಹದಲ್ಲಿ ಒಟ್ಟು 13 ಸ್ಥಳಗಳಲ್ಲಿ ತಿಲಕವನಿಟ್ಟುಕೊಳ್ಳಬಹುದು. ಆದರೆ ಅನೇಕರು ಹಣೆಯ ಮೇಲೆ ಧರಿಸುತ್ತಾರೆ. ಯಾಕೆಂದರೆ ಅದು ಮಂಗಳ ಗ್ರಹದ ಸ್ಥಾನವಾಗಿದ್ದು, ಆತನಿಗೆ ಕೆಂಪು ಅಂದರೆ ಇಷ್ಟವಾದ್ದರಿಂದ ಅಲ್ಲಿ ಇಟ್ಟರೆ ಮಂಗಳಕರವಾಗಿರುತ್ತದೆ ಎಂಬುದು ನಂಬಿಕೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಅದೃಷ್ಟವೋ ಅಥವಾ ದುರಾದೃಷ್ಟವೊ ಎಂದು ತಿಳಿಬೇಕಾ…?