ಬೆಂಗಳೂರು: ಹೆಚ್ಚಿನವರ ಮನೆಯಲ್ಲಿ ಫ್ಯಾಮಿಲಿ ಫೋಟೋ ಎಂದು ಇದ್ದೇ ಇರುತ್ತದೆ. ಕೆಲವರ ಮನೆಯಲ್ಲಿ ಇದು ಪ್ರತೀ ರೂಂಗೆ ಒಂದರಂತೆ ವಿಭಿನ್ನ ಭಂಗಿಯಲ್ಲಿರುವ ಫೋಟೋಗಳಿರುತ್ತವೆ. ಆದರೆ ಫ್ಯಾಮಿಲಿ ಫೋಟೋ ಇಡಲೂ ಒಂದು ಸೂಕ್ತ ಜಾಗವಿದೆ.
ಕುಟುಂಬದ ಸದಸ್ಯರನ್ನೊಳಗೊಂಡ ಫ್ಯಾಮಿಲಿ ಫೋಟೋವನ್ನು ಸೂಕ್ತ ಜಾಗದಲ್ಲಿ ಇರಿಸಿದರೆ ಮಾತ್ರ ಮನೆಯಲ್ಲಿ ಅಭಿವೃದ್ಧಿ, ಸಕಾರಾತ್ಮಕ ಭಾವ ಇರಲು ಸಾಧ್ಯ. ವಾಸ್ತು ಪ್ರಕಾರ ಫ್ಯಾಮಿಲಿ ಫೋಟೋ ಇಡಲು ಇಂತಹದ್ದೇ ಆದ ಜಾಗವಿದೆ. ಅದು ಯಾವ ಜಾಗ ಎಂಬುದನ್ನು ಇಲ್ಲಿ ನೋಡೋಣ.
ಮನೆಯಲ್ಲಿ ಒಂದು ರೀತಿಯ ಸಂತೋಷದ ವಾತಾವರಣವಿರಬೇಕು ಎಂದರೆ ಈಶಾನ್ಯ ಭಾಗದ ಗೋಡೆಯ ಪೂರ್ವ ಭಾಗದಲ್ಲಿ ಫ್ಯಾಮಿಲಿ ಫೋಟೋವನ್ನಿರಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ ಮತ್ತು ನಿಮ್ಮ ಮಕ್ಕಳ ಮೇಲೂ ಇದು ಪರಿಣಾಮ ಬೀರುತ್ತದೆ.
ಒಂದು ವೇಳೆ ನೀವು ಬ್ಯಾಚುಲರ್ ಆಗಿದ್ದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮನೆಯ ಉತ್ತರ ದಿಕ್ಕಿನ ಗೋಡೆಗೆ ಫ್ಯಾಮಿಲಿ ಫೋಟೋ ಆತುಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ವಾಯವ್ಯ ದಿಕ್ಕಿನಲ್ಲಿ ಫ್ಯಾಮಿಲಿ ಫೋಟೋ ಹಾಕುವುದರಿಂದ ಮನೆಯ ಸದಸ್ಯರ ನಡುವೆ ಪರಸ್ಪರ ಸಹಕಾರ, ಪ್ರೀತಿ ಇರುತ್ತದೆ.