ಗಣೇಶ ಚತುರ್ಥಿ ಹಬ್ಬದಂದು ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆಯನ್ನು ಸ್ವಚ್ಛ ಮಾಡಬೇಕು,ನಂತರ ಹಾಲು ಅಥವಾ ಎಣ್ಣೆಯನ್ನು ಹಚ್ಚಿಕೊಂಡು ತಲೆಗೆ ಸ್ನಾನ ಮಾಡಬೇಕು.ವ್ರತ ಮಾಡುವವರು ಮಡಿವಸ್ತ್ರ ಧರಿಸಬೇಕು. ಮೂರ್ತಿಯನ್ನು ಸ್ಥಾಪನೆ ಮಾಡುವಾಗ ಮೊದಲಿಗೆ ಮಣೆಯ ಮದ್ಯ ಭಾಗದಲ್ಲಿ ಒಂದು ಮುಷ್ಟಿ ಅಕ್ಷತೆಯನ್ನು ಇಟ್ಟು ಇದರ ಮೇಲೆ ,ಅರಿಶಿನ, ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ರಂಗೋಲಿಯ ಪುಡಿಯಲ್ಲಿ ಬಿಡಿಸಬೇಕು.ಹೊಸ ಕೆಂಪು ವಸ್ತ್ರವನ್ನು ಮಣೆಯ ಮೇಲೆ ಹಾಸಬೇಕು.ಇದರ ಮೇಲೆ ತಟ್ಟೆ ಅಥವಾ ಬಾಳೆ ಎಲೆಯನ್ನು ಇಟ್ಟು ಅದರಲ್ಲಿ ಅಕ್ಕಿ ಹಾಕಬೇಕು ನಂತರ ಗಣೇಶನನ್ನು ಸ್ಥಾಪಿಸಬೇಕು.
ಹೂ,ಹಣ್ಣುಗಳಿಂದ ದೇವರನ್ನು ಅಲಂಕರಿಸಿದ ಬಳಿಕ ವಿನಾಯಕನಿಗೆ ಷೋಡೋಶೋಪಚಾರ ಪೂಜೆಯನ್ನು ಮಾಡಿ ದೀಪಾರಾಧನೆ ಮಾಡಬೇಕು. ಬಳಿಕ ಒಳ್ಳೆಯ ದಿನ ಹಾಗೂ ಸಮಯ ನೋಡಿಕೊಂಡು ಗಣಪನ ಮೂರ್ತಿಯನ್ನು ಶ್ರದ್ದೆ,ಭಕ್ತಿಯಿಂದ, ಹರಿಯುವ ನೀರಿನಲ್ಲಿ ವಿಸರ್ಜಿಸಿದರೆ ಉತ್ತಮ.