ಬೆಂಗಳೂರು : ಪ್ರತಿಯೊಬ್ಬರಿಗೂ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರು ಮನೆಯಲ್ಲಿ ಬಾವಿಯನ್ನು ನಿರ್ಮಿಸುತ್ತಾರೆ. ಆದರೆ ಈ ಬಾವಿಯಲ್ಲಿ ಸದಾ ಕಾಲ ನೀರು ಇರಬೇಕೆಂದರೆ ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.
ಬಾವಿಯನ್ನು ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ನಿರ್ಮಿಸಬೇಕು. ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿರಬಾರದು. ಒಂದು ವೇಳೆ ನೀರಿನ ಪೈಪ್ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿದ್ದರೆ ಬಾವಿಯು ಅದರ ಎಡ ಅಥವಾ ಬಲಕ್ಕಿದ್ದು ಮಧ್ಯದಲ್ಲಿರಬಾರದು.
ಬಾವಿಯು ವೃತ್ತಾಕಾರವಾಗಿರಬೇಕು. ನೀರಿಗೆ ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ಸೂರ್ಯನ ಬೆಳಕು ಬೀಳುವಂತಿರಬೇಕು. ಬಾವಿ ನೀರನ್ನು ಎರಡು ಮನೆಯವರು ಪಾಲು ಮಾಡಿಕೊಳ್ಳಬಾರದು. ಪೂಜೆ ಮಾಡಿದ ಬಳಿಕವೇ ಬಾವಿ ತೋಡುವ ಕಾರ್ಯ ಆರಂಭಿಸಬೇಕು.
ನೀವು ನಿರ್ಮಿಸುವ ಬಾವಿಯಲ್ಲಿ ಸದಾ ಕಾಲ ನೀರು ತುಂಬಿರಬೇಕೆಂದರೆ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಹಾಗೂ ಕೃತಿಕಾ, ಪೂರ್ವ ಪಲ್ಗುಣಿ, ಮೂಲ, ಭರಣಿ, ಅಶ್ಲೇಷಾ ಪೂರ್ವಾಭಾದ್ರ ಮತ್ತು ಪೂರ್ವಾಷಾಢ ನಕ್ಷತ್ರದಲ್ಲಿಯೂ ಬಾವಿ ತೋಡಲು ಆರಂಭಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.