ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ವಿಘ್ನೇಶ್ವರನಿಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಯಾಕೆಂದರೆ ಆತ ಸಕಲ ಗಣಗಳಿಗೆ ಅಧಿಪತಿ. ನಾವು ಮಾಡುವ ಕೆಲಸಕ್ಕೆ ಯಾವುದೇ ವಿಘ್ನ ಆಗದಂತೆ ನೇರವೇರಲು ಮೊದಲು ಆತನ ಬಳಿ ಪ್ರಾರ್ಥಿಸುತ್ತೇವೆ. ಎಲ್ಲಿ ಯಾವುದೇ ಶುಭಕಾರ್ಯ ನಡೆದರೂ ಮೊದಲ ಪೂಜೆ ಆ ಗಣಪನಿಗೆ ತಲುಪುತ್ತದೆ.
ಹಾಗೆ ಹಿಂದೂಗಳು ತಮ್ಮ ವಿವಾಹದ ಕಾರ್ಯದ ಭಾಗವಾಗಿ ತಮ್ಮ ಲಗ್ನಪತ್ರಿಕೆಗಳ ಮೇಲೆ ಗಣೇಶನ ಪೋಟೋವನ್ನು ಕಡ್ಡಾಯವಾಗಿ ಮುದ್ರಿಸಿರುತ್ತಾರೆ ಹಾಗೆ ಯಾಕೆ ಮಾಡುತ್ತಾರೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ.
ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವ ದೇವರಾಗಿ ವಿಘ್ನೇಶ್ವರನಿಗೆ ಹೆಸರಿದೆ. ಅದಕ್ಕೆ ಯಾವುದೇ ವ್ಯಕ್ತಿಯ ಜೀವನದಲ್ಲಿ ನಡೆಯುವ ಅತಿಮುಖ್ಯವಾದ ಸಂಭ್ರಮದ ಕಾರ್ಯವಾದ ವಿವಾಹ ಯಾವುದೇ ತೊಂದರೆಗಳಾಗದಂತೆ ನೇರವೇರಲಿ ಎಂಬ ಆಶಯದೊಂದಿಗೆ ವಿವಾಹದ ಆಹ್ವಾನ ಪತ್ರಿಕೆಯ ಮೇಲೆ ಆತನ ಚಿತ್ರವನ್ನು ಮುದ್ರಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ