ಬೆಂಗಳೂರು: ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಾಮರ್ಥ್ಯವಿರುವ ವ್ಯಕ್ತಿ ಅಗತ್ಯವಿರುವವರಿಗೆ ಅವಶ್ಯವಾಗಿ ದಾನಮಾಡಬೇಕಾಗುತ್ತದೆ. ಅದರಲ್ಲೂ ಮನೆ ಬಾಗಿಲಿಗೆ ಬರುವ ಈ ನಾಲ್ಕು ಮಂದಿಯನ್ನು ಬರಿಗೈಯಲ್ಲಿ ಕಳುಹಿಸಬಾರದು.
ಮನೆಗೆ ಭಿಕ್ಷುಕರು ಬಂದರೆ ಅವರನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಖಾಲಿ ಕೈಯಲ್ಲಿ ಅವರು ಮನೆಯಿಂದ ಹೋದರೆ ದರಿದ್ರ ಮನೆ ಒಳಗೆ ಪ್ರವೇಶ ಮಾಡುತ್ತದೆಯಂತೆ. ಹಾಗೆ ಮಂಗಳಮುಖಿಯರನ್ನು ಬುಧಗ್ರಹವೆಂದು ಪರಿಗಣಿಸಲಾಗಿದೆ. ಅವರು ಮಾಡಿದ ಆಶೀರ್ವಾದ ಬೇಗ ಫಲ ನೀಡುತ್ತದೆ. ಆದ್ದರಿಂದ ಮಂಗಳಮುಖಿಯರು ಮನೆಗೆ ಬಂದಾಗ ಬರಿಗೈಯಲ್ಲಿ ಕಳುಹಿಸಬಾರದು.
ಮನೆಗೆ ಬೇಡಿ ಬರುವ ರೋಗಿಗಳನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ರೋಗಿಗಳನ್ನು ಶನಿ ಹಾಗು ರಾಹುವಿಗೆ ಹೋಲಿಸುವುದರಿಂದ, ಅವರಿಗೆ ದಾನ ಮಾಡಿದರೆ ಶುಭ ಫಲ ಸಿಗುತ್ತದೆಯಂತೆ. ಮನೆಗೆ ಬಂದ ವೃದ್ಧ ಭಿಕ್ಷುರನ್ನು ಕೂಡ ಹಾಗೆ ಕಳುಹಿಸಬಾರದು. ವೃದ್ಧರ ಆಶಿರ್ವಾದದಿಂದ ಗುರುವಿನ ಅಶುಭ ಪ್ರಭಾವ ದೂರವಾಗುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ