ಬೆಂಗಳೂರು : ಮನೆಗೆ ವಾಸ್ತು ಅಗತ್ಯ. ಆದರೆ ಕೆಲವೊಮ್ಮೆ ವಾಸ್ತು ಸರಿಯಿದ್ದರೂ ಮನೆಯವರು ಮಾಡುವ ಇಂತಹ ಕೆಲಸದಿಂದ ವಾಸ್ತು ದೋಷಕ್ಕೆ ಕಾರಣವಾಗುತ್ತೆ. ಇದರಿಂದ ನೀವು ಎಷ್ಟು ದುಡಿದರೂ ಹಣ ಉಳಿತಾಯವಾಗುವುದಿಲ್ಲ.
ಹೌದು. ಮನೆಯಲ್ಲಿ ಎಲ್ಲೆಂದರಲ್ಲಿ ಪೊರಕೆ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಕಪಾಟಿನ ಹಿಂದೆ ಅಥವಾ ಬೆಲೆ ಬಾಳುವ ವಸ್ತುಗಳ ಹಿಂದೆ ಅಥವಾ ಪಕ್ಕದಲ್ಲಿ ಪೊರಕೆಯನ್ನಿಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾತ್ರೆಗಳನ್ನಿಡುವುದು ಶುಭವಲ್ಲ. ಇದು ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಲು ಕಾರಣವಾಗುತ್ತದೆ. ಮನೆಯ ಗೋಡೆ ಅಥವಾ ಖುರ್ಚಿ ಮೇಲೆ ಪೆನ್ಸಿಲ್, ಪೆನ್ ಹಾಗೂ ಚಾಕ್ಪೀಸ್ ನಿಂದ ಯಾವುದೇ ಚಿತ್ರ ಬಿಡಿಸದಂತೆ ನೋಡಿಕೊಳ್ಳಿ. ಇದರಿಂದ ಖರ್ಚು ಹೆಚ್ಚಾಗುವ ಜೊತೆಗೆ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮನೆ ಅಥವಾ ಅಂಗಡಿಯ ಉತ್ತರ-ಪೂರ್ವ ದಿಕ್ಕಿನಲ್ಲಿ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಬೆಡ್ ರೂಂನಲ್ಲಿ ದೇವರ ಮೂರ್ತಿಯಿಟ್ಟು ಪೂಜೆ ಮಾಡಬೇಡಿ. ಇದು ಅಶಾಂತಿ, ಆರ್ಥಿಕ ದುಃಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಮನೆಯಲ್ಲಿ ಮುಳ್ಳಿನ, ಹಾಲು ಬರುವಂತಹ ವಿಷದ ಗಿಡವನ್ನು ನೆಡಬಾರದು. ಇದು ಧನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.