Webdunia - Bharat's app for daily news and videos

Install App

ಸತಿಪತಿ ಇಬ್ಬರು ಜೊತೆಯಾಗಿ ಈ ದೇವಸ್ಥಾನಕ್ಕೆ ಹೋಗಬಾರದಂತೆ

Webdunia
ಸೋಮವಾರ, 8 ಏಪ್ರಿಲ್ 2019 (09:17 IST)
ಬೆಂಗಳೂರು : ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಸತಿಪತಿಗಳು ಜೊತೆಯಾಗಿ ಮಾಡಬೇಕೆಂದು ಹೇಳುತ್ತಾರೆ. ಹಾಗೇ ಯಾವುದೇ ತೀರ್ಥ ಕ್ಷೇತ್ರಗಳಿಗೂ ಹೋಗುವಾಗ ಜೊತೆಯಾಗಿಯೇ ಹೋಗಬೇಕು ಎಂದು ಹೇಳುತ್ತಾರೆ. ಆದರೆ ಈ ದೇವಸ್ಥಾನಕ್ಕೆ ಮಾತ್ರ ಸತಿಪತಿ ಜೊತೆಯಾಗಿ ಹೋಗಬಾರದಂತೆ.


ಹೌದು. ಹಿಮಾಚಲ ಪ್ರದೇಶ ಹಾಗೂ ಸಿಮ್ಲಾದಿಂದ ಕೇವಲ 20 ಕಿಮಿ ದೂರವಿರುವ ಆದಿ ದೇವತೆ ದುರ್ಗಾಮಾತೆ ದೇಗುಲ. ಈ ದೇವಿಯನ್ನ ಶ್ರಯಕೊಟ ಮಾತಾ ಎಂದು ಕರೆಯಲಾಗುತ್ತದೆ. ಇಲ್ಲಿ ಗರ್ಭ ಗುಡಿಯಲ್ಲಿ ದುರ್ಗಾ ಮಾತೆ ಇದೆ. ಇಲ್ಲಿ ದಂಪತಿಗಳು ಜೊತೆಯಾಗಿ ದೇವಿಯ ದರ್ಶನ ಮಾಡಬಾರದಂತೆ. ಒಂದು ವೇಳೆ ಹೋದರೆ ಇಬ್ಬರ ನಡುವೆ ಜಗಳ ಆಗಿ ಅವರು ಬೇರೆಯಾಗುತ್ತಾರೆ ಎಂಬುದು ಇಲ್ಲಿಯ ಜನರ ನಂಬಿಕೆ. ಆದ್ದರಿಂದ ಗಂಡ - ಹೆಂಡತಿ ಈ ದೇವಸ್ಥಾನಕ್ಕೆ ಹೋದರೆ ಮೊದಲು ಹೆಂಡತಿ ದೇವಿಯ ದರ್ಶನ ಮಾಡಿಕೊಂಡು ಹೊರಗೆ ಬಂದ ತಕ್ಷಣ ಗಂಡ ದೇವಸ್ಥಾನಕ್ಕೆ ಹೋಗುತ್ತಾನೆ.


ಗಣಗಳಿಗೆ ಅಧಿಪತಿಯಾಗಿ ಗಣೇಶನನ್ನು ಶಿವ ಪಾರ್ವತಿ ನೇಮಿಸಿದಾಗ ಸುಬ್ರಮಣ್ಯನು ಕೋಪಗೊಳ್ಳುತ್ತಾನೆ. ಇದರಿಂದ ಬೇಸರಗೊಂಡ ಪಾರ್ವತಿ ತಾನು ನೆಲೆಸಿರುವ ಜಾಗ ಸರಿಯಾಗಿ ಇಲ್ಲ ಎಂದು ಭಾವಿಸುತ್ತಾಳೆ.‌ ಆ ಜಾಗವೇ ಶ್ರಯಕೋಟೆ. ಇನ್ನು ಈ ಜಾಗಕ್ಕೆ ಪಾರ್ವತಿ ಶಾಪವನ್ನ ಇಟ್ಟಿದ್ದರಂತೆ. ಅದೇನೆಂದರೆ ಈ ಜಾಗಕ್ಕೆ ದಂಪತಿ ಒಟ್ಟಿಗೆ ಬಂದರೆ ಬೇರೆ - ಬೇರೆಯಾಗುತ್ತಾರೆ ಎಂದು ಶಾಪ ಇಟ್ಟಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments