ಬೆಂಗಳೂರು: ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಬ್ಬೊಬ್ಬ ದೇವತೆಯ ದಿನವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾವ ಕೆಲಸ ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ನೋಡೋಣ.
ಸೋಮವಾರದಂದು ಮಾಡಬಾರದ ಕೆಲಸಗಳು
ಸೋಮವಾರ ಶಿವನ ದಿನ ಚಂದ್ರ ಗ್ರಹ ಅಧಿದೇವತೆಯಾಗಿರುವ ದಿನವೂ ಹೌದು. ಈ ದಿನ ಚಂದ್ರ ದೋಷ ಇರುವವರು ಸಕ್ಕರೆ ಅಥವಾ ಸಕ್ಕರೆ ಅಂಶದ ಪದಾರ್ಥ ಸೇವಿಸಬಾರದು. ಈ ದಿನ ನಿಮ್ಮ ತಾಯಿ ಅಥವಾ ಮನೆಯ ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಈ ದಿನ ತಾಮಸಿಕ ಆಹಾರದಿಂದ ದೂರವಿರುವುದು ಉತ್ತಮ.
ಅದೇ ರೀತಿ ಸೋಮವಾರದಂದು ಅನಿವಾರ್ಯದ ಹೊರತಾಗಿ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಮಹಿಳೆಯರನ್ನು ಅವಮಾನಿಸುವುದು ನಿಮಗೆ ಕೆಡುಕುಂಟು ಮಾಡಬಹುದು. ಈ ದಿನ ಶನಿಗೆ ಸಂಬಂಧಿಸಿದಂತೆ ಕಪ್ಪು ಬಟ್ಟೆ ಧರಿಸುವುದು, ಎಳ್ಳು ಸೇವನೆ ಮಾಡುವುದು ನಿಷಿದ್ಧವಾಗಿದೆ. ಈ ದಿನ ಪೂರ್ವ, ಉತ್ತರ ಮತ್ತು ಆಗ್ನೇಯ ದಿಕ್ಕಿಗೆ ಪ್ರಯಾಣಿಸಬಾರದು.
ಸೋಮವಾರ ಮಾಡಬೇಕಾದ ಕೆಲಸಗಳು
ಸೋಮವಾರದಂದು ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠವಾಗಿದೆ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವ ಪತ್ರೆಯಿಂದ ಅರ್ಚಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆಯ ಪೂಜೆಗಳನ್ನು ಮಾಡಬಹುದಾಗಿದೆ.