ಬೆಂಗಳೂರು : ಮನೆಗೆ ಬೀಗ ಹಾಕಿದರೂ ಕೂಡ ಅದನ್ನು ಮುರಿದು ಕಳ್ಳಕಾಕರು ನುಗ್ಗುತ್ತಾರೆ. ಇಂತಹ ಪರಿಸ್ಥಿತಿ ಎದುರಾಗಬಾರದಂತಿದ್ದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಬೀಗ ಹಾಕಿ. ಇದರಿಂದ ಕಳ್ಳರು ನುಗ್ಗಲು ಸಾಧ್ಯವಾಗುವುದಿಲ್ಲ.
ಪೂರ್ವದಿಕ್ಕು ಸೂರ್ಯನ ದಿಕ್ಕಾಗಿರುವುದರಿಂದ ಆ ದಿಕ್ಕಿನ ಮನೆ ಬಾಗಿಲಿಗೆ ತಾಮ್ರದ ಬೀಗ ಹಾಕಿ. ಪಶ್ಚಿಮ ದಿಕ್ಕು ಶನಿಯ ದಿಕ್ಕಾಗಿರುವುದರಿಂದ ಆ ದಿಕ್ಕಿನಲ್ಲಿರುವ ಬಾಗಿಲಿಗೆ ಕಬ್ಬಿಣದ ಬೀಗ ಹಾಕಿ. ದಕ್ಷಿಣ ದಿಕ್ಕಿನ ಬಾಗಿಲಿಗೆ ಪಂಚಲೋಹದ ಬೀಗವನ್ನು ಹಾಕಿ. ಉತ್ತರ ದಿಕ್ಕಿನ ಬಾಗಿಲಿಗೆ ಹಿತ್ತಾಳೆ ಬೀಗವನ್ನು ಹಾಕಿ.
ಹಾಗೇ ಮನೆಯ ಬಾಗಿಲಿನಿಂದ ಹಾಗೂ ಕಿಟಕಿಯ ಬಾಗಿಲಿನಿಂದ ಕರ್ಕಶ ಶಬ್ದಗಳು ಬಾರದಂತೆ ನೋಡಿಕೊಳ್ಳಿ. ಅಂತಹ ಶಬ್ದ ಮಾಡುವ ಬಾಗಿಲನ್ನು ತೆಗೆದುಹಾಕಿ. ಹಾಗೇ ದೇವರ ಮನೆಗೆ ಯಾವುದೇ ಕಾರಣಕ್ಕೂ ಬೀಗ ಹಾಕಬೇಡಿ.