ಬೆಂಗಳೂರು : ದಾನ ನೀಡುವುದು ಅತಿ ಶ್ರೇಷ್ಟವಾದ ಕೆಲಸ. ನಮ್ಮ ಪಾಪ ಕರ್ಮಗಳು ಕಳೆಯಬೇಕೆಂದರೆ ದಾನ ಧರ್ಮ ಮಾಡಬೇಕೆಂದು ಹೇಳುತ್ತಾರೆ. ಆದರೆ ದಾನ ನೀಡುವಾಗ ಕೆಲವೊಂದು ವಸ್ತುಗಳನ್ನು ದಾನವಾಗಿ ನೀಡಿದರೆ ಪಾಪ ಕರ್ಮ ಕಳೆಯುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ.
ಹಾಗೇ ಕೆಲವರು ತಮ್ಮ ಗೃಹದೋಷಗಳನ್ನ ತೊಲಗಿಸಿಕೊಳ್ಳಲು ಮನೆಗೆ ಬಂದವರಿಗೆ ಕೆಲವು ವಸ್ತುಗಳನ್ನ ದಾನವಾಗಿ ಕೊಡುತ್ತಾರೆ, ಆದರೆ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನವಾಗಿ ನೀಡಬೇಡಿ.
*ಪ್ಲಾಸ್ಟಿಕ್ ವಸ್ತುಗಳನ್ನ ಯಾವುದೇ ಕಾರಣಕ್ಕೂ ದಾನ ಮಾಡಬಾರದು, ಹೌದು ಪ್ಲಾಸ್ಟಿಕ್ ನ್ನ ದಾನ ಮಾಡಿದರೆ ಅವರಿಗೆ ನಿಧಾನವಾಗಿ ದರಿದ್ರ ಅಂಟಿಕೊಳ್ಳುತ್ತದೆ ಮತ್ತು ಕಷ್ಟಗಳು ಬರುತ್ತದೆ.
* ಕಸದ ಪೊರಕೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಸದ ಪೊರಕೆಯನ್ನ ಲಕ್ಷ್ಮಿಯ ಸ್ವರೂಪ ಎಂದು ಭಾವಿಸುತ್ತೇವೆ, ಆದ್ದರಿಂದ ಕಸದ ಪೊರಕೆಯನ್ನ ದಾನವಾಗಿ ಕೊಡಬಾರದು ಮತ್ತು ದಾನವಾಗಿ ಸ್ವೀಕರಿಸಲು ಬಾರದು, ಒಂದುವೇಳೆ ಕೊಟ್ಟರೆ ನೀವು ಸಂಪಾದನೆ ಮಾಡಿದ ಹಣ ಮತ್ತು ಎಲ್ಲ ಆಸ್ತಿಗಳು ನಿಮ್ಮಿಂದ ದೂರವಾಗುತ್ತದೆ.
* ಇನ್ನು ಪಾತ್ರೆಗಳನ್ನ ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು, ಹೀಗೆ ಪಾತ್ರಗಳನ್ನ ದಾನವಾಗಿ ಕೊಟ್ಟರೆ ಅದು ಮನೆಗೆ ದರಿದ್ರವನ್ನ ತಂದೊಡ್ಡುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
* ಎಣ್ಣೆಯನ್ನ ದಾನವಾಗಿ ಕೊಡಬಾರದು, ಹೀಗೆ ದಾನವಾಗಿ ಕೊಟ್ಟರೆ ಶನೇಶ್ವರನನ್ನ ಆಹ್ವಾನಿಸಿದಂತೆ ಆಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.