ಬೆಂಗಳೂರು : ಹೋಟೆಲ್ ಗಳಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಲಿಫ್ಟ್ ಅಥವಾ ಮೆಟ್ಟಿಲುಗಳನ್ನು ಇಡುತ್ತಾರೆ. ಆದರೆ ಇವುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದರೆ ಹೋಟೆಲ್ ವ್ಯವಹಾರ ಉತ್ತಮವಾಗಿ ನಡೆಯುತ್ತದೆ.
ವಾಸ್ತು ಪ್ರಕಾರ ಹೋಟೆಲ್ ಗಳಲ್ಲಿ ಮೆಟ್ಟಿಲು, ಲಿಫ್ಟ್ ಗಳನ್ನು ನಿರ್ಮಿಸುವಾಗ ದಕ್ಷಿಣ ದಿಕ್ಕು, ಪಶ್ವಿಮ ದಿಕ್ಕು ಅಥವಾ ನೈರುತ್ಯ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ವೃತ್ತಾಕಾರದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಮೆಟ್ಟಿಲುಗಳ ದಿಕ್ಕು ಪ್ರದಕ್ಷಿಣಾಕಾರವಾಗಿರಬೇಕು. ಆದರೆ ಮೆಟ್ಟಿಲುಗಳನ್ನು ಪೂರ್ವದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಪಶ್ವಿಮಕ್ಕೆ , ಪಶ್ವಿಮದಿಂದ ಉತ್ತರಕ್ಕೆ ಮಾತ್ರ ತಿರುಗಿಸಬೇಕು. ಹಾಗೇ ಲಿಫ್ಟ್ ಗಳನ್ನು ದಕ್ಷಿಣ, ಪಶ್ವಿಮ ಅಥವಾ ನೈರುತ್ಯ ದಿಕ್ಕಿಗೆ ಮುಖಮಾಡಿ ನಿರ್ಮಿಸಿ.