ಬೆಂಗಳೂರು : ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿಕೊಂಡು, ಆರತಿ ಸ್ವೀಕರಿಸಿದ ನಂತರ ತೀರ್ಥವನ್ನು ತೆಗೆದುಕೊಳ್ಳುತ್ತೇವೆ. ಬೆರಳುಗಳನ್ನು ಗೋಕರ್ಣ ಮುದ್ರೆಯಲ್ಲಿ ಇರಿಸಿ ತೀರ್ಥವನ್ನು ಸ್ವೀಕರಿಸುತ್ತೇವೆ. ಹೀಗೆ ತೀರ್ಥವನ್ನು ಸೇವಿಸಿದ ನಂತರ ಮಿಕ್ಕುಳಿದ ತೀರ್ಥವನ್ನು ಬಹಳಷ್ಟು ಜನ ತಮ್ಮ ತಲೆಗೆ ಸವರಿಕೊಳ್ಳುತ್ತಾರೆ. ಆದರೆ ಈರೀತಿ ಮಾಡಬಾರದಂತೆ.
ಯಾಕೆಂದರೆ ತೀರ್ಥದಲ್ಲಿರುವ ಜೇನು, ಸಕ್ಕರೆ ಮೊದಲಾದುವು ಕೂದಲಿಗೆ ಹಾನಿಯನ್ನು ಉಂಟುಮಾಡುತ್ತವೆ. ಅದೇರೀತಿ ತುಳಸಿ ತೀರ್ಥವನ್ನು ಸೇವಿಸಿದ ನಂತರವೂ ತಲೆಗೆ ಸವರಿಕೊಳ್ಳ ಬಾರದಂತೆ. ತೀರ್ಥ ಸೇವಿಸಿದ ನಂತರ ಕೈ ಎಂಜಲಾಗುತ್ತದೆ. ಎಂಜಲು ಕೈಯನ್ನು ತಲೆಗೆ ಸವರಿಕೊಳ್ಳ ಬಾರದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ