ಬೆಂಗಳೂರು : ತುಂಬ ಜನರಿಗೆ ದೇವರ ನಾಮವನ್ನು ಎಲ್ಲೆಂದರಲ್ಲಿ ಸ್ಮರಿಸುವ ಅಭ್ಯಾಸವಿರುತ್ತದೆ. ದೇವರ ನಾಮ ಸ್ಮರಿಸುವುದು ಒಳ್ಳೆಯದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಥವಾ ಪ್ರದೇಶಗಳಲ್ಲಿ ದೇವರನಾಮ ಸ್ಮರಿಸಬಾರದು. ಇದರಿಂದ ನರಕ ಪ್ರಾಪ್ತಿಯಾಗುತ್ತದೆಯಂತೆ.
*ಕೆಲವರು ಸ್ನಾನದ ಕೋಣೆಯಲ್ಲಿ ದೇವರನಾಮ ಸ್ಮರಿಸುತ್ತಾರೆ ಅಥವಾ ದೇವರ ಗೀತೆಗಳನ್ನು ಹಾಡುತ್ತಾರೆ. ಹೀಗೆ ಮಾಡಬಾರದಂತೆ.
* ದಂಪತಿಗಳು ಅನೂನ್ಯವಾಗಿರುವ ವೇಳೆ ದೇವರನಾಮ ಸ್ಮರಿಸಬಾರದು. ಹೀಗೆ ಮಾಡಿದರೆ ಆ ದಂಪತಿಗಳ ನಡುವೆ ಕಲಹ ಉಂಟಾಗುತ್ತದೆಯಂತೆ.
* ಮಾಂಸಾಹಾರ ಸೇವಿಸುವಾಗ ದೇವರ ಬಗ್ಗೆ ಮಾತನಾಡಬಾರದು. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆಯಂತೆ.
* ಹೆಚ್ಚಿನವರು ಆಕಳಿಸುವಾಗ ಹಾಗೂ ಸೀನುವಾಗ ದೇವರನಾಮ ಸ್ಮರಿಸುತ್ತಾರೆ. ಹೀಗೆ ಮಾಡಬಾರದಂತೆ.
*ಮಹಿಳೆಯರು ಋತು ಚಕ್ರ ಸಮಯದಲ್ಲಿ ದೇವರನಾಮ ಸ್ಮರಿಸಬಾರದು ಎಂದು ಶಾಸ್ತ್ರಗಳು ಹೇಳುತ್ತಿವೆ. ಒಂದು ವೇಳೆ ದೇವರನಾಮ ಸ್ಮರಿಸಿದರೆ ಮೋಕ್ಷಗಳಿಸಲು ಕಷ್ಟವಾಗುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ