ಬೆಂಗಳೂರು : ಯಾವುದೇ ಕಾರ್ಯದ ನಿಮಿತ್ತ ಹೊರಗಡೆ ಹೋಗುವಾಗ ನಾವು ಆ ಕಾರ್ಯ ಸಫಲವಾಗಲಿ ಎಂದು ಬಯಸುತ್ತೇವೆ. ಆದಕಾರಣ ನೀವು ಹೊರಗಡೆ ಹೋಗುವಾಗ ಇವರು ನಿಮ್ಮ ಎದುರಿಗೆ ಸಿಕ್ಕರೆ ಆ ಕೆಲಸ ಸಫಲವಾಗುತ್ತದೆ, ಆ ದಿನವೆಲ್ಲಾ ಶುಭ ಎನಿಸುತ್ತದೆ.
ಗೃಹಿಣಿಯನ್ನು ಗೃಹಲಕ್ಷ್ಮೀ, ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಅದರಲ್ಲೂ ಮುತ್ತೈದೆಯರನ್ನು ಸಾಕ್ಷಾತ್ ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ. ಆದಕಾರಣ ನೀವು ಹೊರಗಡೆ ಹೋಗುವಾಗ ಮುತ್ತೈದೆ ಎದುರಿಗೆ ಬಂದರೆ ನೀವು ಹೋದ ಕೆಲಸ ಪೂರ್ಣಗೊಳ್ಳುವುದು.