ಬೆಂಗಳೂರು: ಎಲ್ಲರಿಗೂ ತಾವು ಧನವಂತರಾಗಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಕಷ್ಟ ಪಟ್ಟರೆ ಮಾತ್ರ ಹಣ ಗಳಿಸಲು ಸಾಧ್ಯ. ಆದರೆ ಕೆಲವರು ಎಷ್ಟೆ ಕಷ್ಟಪಟ್ಟರೂ ಅವರ ಕೈಯಲ್ಲಿ ಹಣ ಉಳಿಯದೆ ಎಲ್ಲಾ ಖರ್ಚಾಗಿ ಹೋಗುತ್ತದೆ. ಕೆಲವೊಮ್ಮೆ ನಮ್ಮ ದಾರಿದ್ರ್ಯಕ್ಕೆ ನಾವೇ ಕಾರಣವಾಗಿರುತ್ತೆವೆ. ನಮಗೆ ಗೊತ್ತಿಲ್ಲದೆ ಮಾಡುವ ಕೆಲಸದಿಂದ ಬಡತನ ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳು ನಮ್ಮ ದಾರಿದ್ರ್ಯಕ್ಕೆ ಕಾರಣವಾಗಿರುತ್ತವೆ. ಅವುಗಳನ್ನು ಮೊದಲು ಮನೆಯಿಂದ ಹೊರಹಾಕಬೇಕು.
ಮನೆಯಲ್ಲಿ ಪಾರಿವಾಳ ಗೂಡು ಕಟ್ಟಿದ್ದರೆ ಅದು ಒಳ್ಳೆಯದಲ್ಲ. ಪಾರಿವಾಳಕ್ಕೆ ಹಾನಿಯಾಗದಂತೆ ಅದನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು. ಹಾಗೆ ಮನೆಯಲ್ಲಿ ಜೇನುಗೂಡು ಕಟ್ಟಬಾರದು. ಇದರಿಂದ ಮನೆಯಲ್ಲಿ ದುರಾದೃಷ್ಟ ಉಂಟಾಗುತ್ತದೆ. ಮನೆಯಲ್ಲಿ ಜೇಡರ ಬಲೆ ಇರಬಾರದು. ಇದರಿಂದ ಮನೆಯಲ್ಲಿ ಸಾಲಬಾಧೆ ಕಾಡುತ್ತದೆ.
ಹಾಗೆ ಮನೆಯಲ್ಲಿ ಒಡೆದ ಕನ್ನಡಿ ಇದ್ರೆ ತೆಗೆಯಬೇಕು. ಏಕೆಂದರೆ ಅದು ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಗೂಬೆ ಮನೆಯೊಳಗೆ ಬರಬಾರದು. ಬಂದರೆ ಅದು ಮರಣ ಸೂಚನೆ ಎನ್ನುತ್ತಾರೆ ಹಿರಿಯರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ