ಬೆಂಗಳೂರು : ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಶುಭ ಸಮಯವನ್ನು ನೋಡುತ್ತಾರೆ. ಯಾಕೆಂದರೆ ಶುಭ ಸಮಯದಲ್ಲಿ ಮಾಡಿದ ಕೆಲಸಗಲು ಯಶಸ್ಸು ಗಳಿಸುತ್ತದೆ ಎಂಬುದು ನಂಬಿಕೆ.
ಆದರೆ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಈ ಅವಧಿಯಲ್ಲಿ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದಿಲ್ಲ. ಮದುವೆಗೆ ಸಂಬಂಧಿಸಿದ ಕೆಲಸ, ಧಾರ್ಮಿಕ ಕೆಲಸ , ಮನೆ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಒಂದು ವೇಳೆ ರಾಹುಕಾಲದಲ್ಲಿ ಕೆಲಸಗಳನ್ನು ಮಾಡುವಂತಹ ಸಂದರ್ಭ ಬಂದಾಗ ಈ ಪರಿಹಾರಗಳನ್ನು ಮಾಡಿ.
ರಾಹುಕಾಲದಲ್ಲಿ ಪ್ರಯಾಣಿಸುವಂತಹ ಅನಿವಾರ್ಯ ಬಂದರೆ ವೀಳ್ಯದೆಲೆ ಎಲೆ, ಮೊಸರು, ಅಥವಾ ಸಿಹಿ ಏನನ್ನಾದರೂ ತಿನ್ನುವ ಮೂಲಕ ಮನೆಯಿಂದ ಹೊರಗೆ ಹೋಗಿ. ಹಾಗೇ ಮುಂದೆ ಹೋಗುವ ಮುನ್ನ 10 ಹೆಜ್ಜೆಗಳನ್ನು ಹಿಮ್ಮುಖವಾಗಿ ನಡೆದು ನಂತರ ಪ್ರಯಾಣ ಬೆಳೆಸಿ. ಈ ಸಮಯದಲ್ಲಿ ಶುಭ ಕೆಲಸವನ್ನು ಮಾಡಲು ಬಯಸಿದ್ದರೆ ಹನುಮಾನ್ ಚಾಲೀಸ್ ಓದಿದ ನಂತರವೇ ಅದನ್ನು ಮಾಡಿ.