ಬೆಂಗಳೂರು : ಪ್ರತಿಯೊಬ್ಬರಿಗೂ ರಾತ್ರಿಯ ವೇಳೆ ಕನಸು ಬೀಳುತ್ತದೆ. ಭವಿಷ್ಯದಲ್ಲಿ ಸಂಭವಿಸುವುದನ್ನು ವಸ್ತುಗಳ, ಪ್ರಾಣಗಳ, ಪಕ್ಷಿಗಳ, ಮನುಷ್ಯರ ರೂಪದಲ್ಲಿ ಬಂದು ಈ ಕನಸು ತಿಳಿಸುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಕನಸಿನಲ್ಲಿ ನಮ್ಮ ಆಪ್ತರು ಕಾಣಿಸಿಕೊಂಡರೆ ಏನರ್ಥ ಎಂಬುದನ್ನು ತಿಳಿದುಕೊಳ್ಳೋಣ.
*ಕನಸಿನಲ್ಲಿ ಸಂಗಾತಿ ಕಾಣಿಸಿದರೆ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ, ಶೀಘ್ರವೇ ಮಹಿಳೆ ಬಾಳಲ್ಲಿ ಸಂತೋಷಕರ ಘಟನೆ ನಡೆಯಲಿದೆ ಎಂದರ್ಥ.
*ಕನಸಿನಲ್ಲಿ ತಾಯಿ ಕಂಡ್ರೆ ಅಥವಾ ಆಕೆಯನ್ನು ಅಪ್ಪಿಕೊಂಡಂತೆ ಕಂಡ್ರೆ ಸೌಭಾಗ್ಯ ಪ್ರಾಪ್ತಿಯಾಗಲಿದೆ ಎಂಬುದರ ಸಂಕೇತ. ದೊಡ್ಡ ಲಾಭವಾಗಲಿದ್ದು, ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ.
* ಮಹಿಳೆಯ ಸ್ವಪ್ನದಲ್ಲಿ ತಂದೆ ಕಾಣಿಸಿಕೊಂಡ್ರೆ ಸುರಕ್ಷತೆಯ ಭರವಸೆ ನೀಡಿದಂತೆ. ಇಂಥ ಮಹಿಳೆ ತನ್ನ ಸುರಕ್ಷತೆ ಹಾಗೂ ಕಾಳಜಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದರ್ಥ.
* ಬಾಲ್ಯದ ಸ್ನೇಹಿತರು ಅಥವಾ ನಿಮ್ಮ ಜೊತೆ ಸದಾ ಕಾಲವಿರುವ ಸ್ನೇಹಿತರು ಕನಸಿನಲ್ಲಿ ಕಂಡ್ರೆ ಸುಖ-ಶಾಂತಿ ಜೀವನ ನಿಮ್ಮದಾಗಲಿದೆ ಎಂದರ್ಥ.
* ಕನಸಿನಲ್ಲಿ ನಿಮ್ಮ ಮಾವ ಕಂಡ್ರೆ ಮುಂದಿನ ದಿನಗಳಲ್ಲಿ ಅಶುಭ ಘಟನೆ ನಡೆಯಲಿದೆ ಎಂದರ್ಥ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ