ಬೆಂಗಳೂರು : ನಮ್ಮ ಪೂರ್ವಿಕರು ಮನೆಯ ಅಡುಗೆ ಕೋಣೆಯನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ವಾಸಸ್ಥಳ ಎಂದು ಭಾವಿಸುತ್ತಾರೆ. ಹಾಗೇ ಅಲ್ಲಿರುವ ವಸ್ತುಗಳು ನಮ್ಮ ಜೀವನದ ಏರುಪೇರಿಗೆ ಕಾರಣವಾಗಿದೆ ಎನ್ನಲಾಗಿದೆ. ಆದ್ದರಿಂದ ಅಡುಗೆ ಮನೆಯಲ್ಲಿರುವ ಈ 5 ವಸ್ತುಗಳು ಯಾವತ್ತು ಪೂರ್ತಿಯಾಗಿ ಖಾಲಿ ಮಾಡಬೇಡಿ.
*ಅಡುಗೆ ಮನೆಯಲ್ಲಿ ನೀರಿನ ಮಡಿಕೆ ಖಾಲಿಯಾಗಬಾರದು, ಅಥವಾ ನಲ್ಲಿಯಲ್ಲಿನ ನೀರು ಪೋಲಾಗಬಾರದು. ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ.
*ಅಡುಗೆ ಮನೆಯಲ್ಲಿ ತೂತಾದ ಪಾತ್ರೆಗಳನ್ನು ಬಳಸಬಾರದು. ಇದರಿಂದ ಆ ಮನೆಯ ಸದಸ್ಯರ ಮೇಲೆ ಶನಿ ದೇವ ಕೆಟ್ಟದೃಷ್ಠಿ ಹರಿಸುತ್ತಾನಂತೆ.
*ಅಡುಗೆ ಮನೆಯಲ್ಲಿರುವ ಅಕ್ಕಿ, ಉಪ್ಪು, ಮೆಣಸು, ಹುಣಸೆ ಹಣ್ಣು, ಸಾಸಿವೆ ಯಾವತ್ತು ಪೂರ್ತಿಯಾಗಿ ಖಾಲಿಯಾಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಕುಬೇರ ಕೂಡ ಕುಚೇಲನಾಗುತ್ತಾನಂತೆ.
*ಹಾಗೇ ಅಡುಗೆ ಮಾಡಿದ ಪಾತ್ರೆಯಲ್ಲಿ ಆಹಾರವನ್ನು ಪೂರ್ತಿಯಾಗಿ ಖಾಲಿ ಮಾಡಬೇಡಿ. ಅದರಲ್ಲಿ ಸ್ವಲ್ಪವಾದರೂ ಇಡಿ. ಇಲ್ಲವಾದರೆ ಆ ಮನೆಯ ಯಜಮಾನನ ಕೈ ಬರಿದಾಗುತ್ತದೆಯಂತೆ.