ಬೆಂಗಳೂರು : ಮನೆಯ ಮುಖ್ಯ ದ್ವಾರ ಶಕ್ತಿಯ ಮಾರ್ಗವಾಗಿದೆ. ಇದರ ಮೂಲಕ ಸಕರಾತ್ಮಕ ಹಾಗೂ ನಕರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಹಾಗಾಗಿ ಈ ಮುಖ್ಯ ಬಾಗಿಲನ್ನು ವಾಸ್ತು ಪ್ರಕಾರ ನಿರ್ಮಿಸಬೇಕು. ಇಲ್ಲವಾದರೆ ಈ ಮುಖ್ಯದ್ವಾರದ ಮೂಲಕ ನಕರಾತ್ಮಕ ಶಕ್ತಿ ಪ್ರವೇಶಿಸಿ ಮನೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.
*ಮನೆಯ ಮುಖ್ಯ ದ್ವಾರ ಈಶಾನ್ಯ ಅಥವಾ ಆಗ್ನೇಯದಲ್ಲಿರಬೇಕು. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ.
*ಮನೆಯ ಮುಖ್ಯದ್ವಾರವನ್ನು ಮನೆಯ ಮಧ್ಯೆದಲ್ಲಿ ನಿರ್ಮಿಸಬಾರದು. ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆ.
*ಮನೆಯ ಬಾಗಿಲು ಒಳಮುಖವಾಗಿ ತೆಗೆಯಬೇಕು ಮತ್ತು ಅದರಿಂದ ಯಾವುದೇ ರೀತಿಯ ಶಬ್ಧ ಬರಬಾರದು.
*ಮನೆಯ ಮುಖ್ಯದ್ವಾರದ ಎದುರುಗಡೆ ಯಾವುದೇ ಮರ, ಗೋಡೆ, ಕಂಬ ಇರಬಾರದು.
*ಮುಖ್ಯ ದ್ವಾರದ ಅಗಲ ಅದರ ಎತ್ತರದ ಅರ್ಧದಷ್ಟಿದೆ. ಮುಖ್ಯದ್ವಾರದ ಮುಂದೆ ಮೆಟ್ಟಿಲುಗಳನ್ನು ಮಾಡಬಾರದು.