ಬೆಂಗಳೂರು : ಮುಖ್ಯವಾದ ಕೆಲಸದ ಮೇಲೆ ಹೊರಗಡೆ ಹೋಗುವಾಗ ಆ ಕೆಲಸ ಸುಸೂತ್ರವಾಗಿ ನೇರವೇರಲಿ ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಹೋಗುವ ಮೊದಲು ಇಂತಹ ಘಟನೆಗಳು ನಡೆದರೆ ನೀವು ಹೋಗವ ಕೆಲಸ ಯಶಸ್ವಿಯಾಗಲ್ಲ ಎಂದರ್ಥ.
ಶಾಸ್ತ್ರದ ಪ್ರಕಾರ ಮಹತ್ವದ ಕೆಲಸಕ್ಕೆ ಹೋಗುವಾಗ ಹಿಂದಿನಿಂದ ಯಾರಾದ್ರೂ ಕೂಗಿದ್ರೆ ನಿಮ್ಮ ಕೆಲಸ ಕೆಟ್ಟಂತೆ. ಕೆಲಸಕ್ಕೆ ಹೋಗುವ ವೇಳೆ ಮನೆಯ ವ್ಯಕ್ತಿ ಟೀ ಕೇಳಿದ್ರೆ ಹೋದ ಕೆಲಸ ಕೆಡೋದು ನಿಶ್ಚಿತ.
ಹಾಗೇ ಮನೆಯಿಂದ ವ್ಯಕ್ತಿ ಹೊರಬಿದ್ದ ತಕ್ಷಣ ಮನೆ ಸದಸ್ಯ ಕೈನಲ್ಲಿ ಪೊರಕೆ ಹಿಡಿದ್ರೆ ಹೋದ ಕೆಲಸವಾಗೋದಿಲ್ವಂತೆ. ನೀವು ಮನೆಯಿಂದ ಹೊರಬೀಳುವ ವೇಳೆ ಕಣ್ಣಿಗೆ ನಾಯಿ ಕಂಡ್ರೆ, ಅದು ನಿಮ್ಮನ್ನು ನೋಡಿ ಬೊಗಳಿದ್ರೆ ಅದು ಅಪಶಕುನವಂತೆ. ಅಪರಿಚಿತ ನಾಯಿಯೊಂದು ನಿಮ್ಮ ಕಾರನ್ನು ಪದೇ ಪದೇ ಮೂಸುತ್ತಿದ್ದರೆ ಏನೋ ಕೆಟ್ಟದ್ದಾಗುತ್ತದೆ ಎಂದರ್ಥ.
ಮನೆಯಿಂದ ಹೊರ ಬೀಳುವ ವೇಳೆ ಬೆಕ್ಕು ನಿದ್ರೆ ಮಾಡಿದ್ದರೆ ಇಲ್ಲವೆ ಎರಡು ಬೆಕ್ಕುಗಳು ಕಿತ್ತಾಡಿಕೊಳ್ಳುತ್ತಿದ್ದರೆ ಅದು ಕೂಡ ಒಳ್ಳೆಯ ಸಂಕೇತವಲ್ಲ. ಮನೆಯಿಂದ ಹೊರ ಹೋಗುವ ವೇಳೆ ಮನೆಯಲ್ಲಿದ್ದ ವ್ಯಕ್ತಿ ಸೀನಿದ್ರೆ ಅಪಶಕುನವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.