ಬೆಂಗಳೂರು : ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆಗೆ ಜಾರುವವರನ್ನು ಪುಣ್ಯಾತ್ಮರು ಎನ್ನುತ್ತಾರೆ. ಯಾಕೆಂದರೆ ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ಒಂದು ವೇಳೆ ತಕ್ಷಣ ನಿದ್ರೆ ಬಂದರೂ ಕೂಡ ಕೆಲವೊಮ್ಮೆ ಕೆಟ್ಟ ಕನಸು ಬಿದ್ದು ತಕ್ಷಣ ಎಚ್ಚರವಾಗುತ್ತದೆ . ಇದರಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಆದ್ದರಿಂದ ನೀವು ಸುಖವಾಗಿ ನಿದ್ದೆ ಮಾಡಬೇಕೆಂದರೆ ಮಲಗುವಾಗ ಈ ರೀತಿ ಮಾಡಿ.
*ನಿದ್ದೆ ಮಾಡುವಾಗ ಕೆಟ್ಟ ಸ್ವಪ್ನ ಬೀಳುತ್ತಿದ್ದರೆ ಮಲಗುವ ಮುನ್ನ ಹನುಮಾನ್ ಚಾಲೀಸ್ ಅಥವಾ ಸುಂದರ್ ಖಾಂಡ್ ಪಠಣ ಮಾಡಿ ಮಲಗಿರಿ. ಆ ಪುಸ್ತಕ ನಿಮ್ಮ ತಲೆ ದಿಂಬಿನ ಕೆಳಗಿರಲಿ. ಇದರಿಂದ ಒತ್ತಡ ಹಾಗೂ ಭಯ ಕಡಿಮೆಯಾಗುತ್ತದೆ.
*ಹಾಸಿಗೆಯ ಬಳಿ ಕಬ್ಬಿಣದ ವಸ್ತುವನ್ನಿಟ್ಟು ಮಲಗುವುದರಿಂದ ನಕಾರಾತ್ಮಕ ಶಕ್ತಿ ಹತ್ತಿರ ಸುಳಿಯುವುದಿಲ್ಲ.
*ಮಾನಸಿಕ ಒತ್ತಡಕ್ಕೊಳಗಾಗಿದ್ದರೆ ಹಾಸಿಗೆ ಬಳಿ ಮೂಲಂಗಿ ಇಟ್ಟು ಮಲಗಿರಿ. ಬೆಳಗ್ಗೆ ಆ ಮೂಲಂಗಿಯನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಿ.
*ದಿಂಬಿನ ಕೆಳಗೆ ದೇವರಿಗೆ ಅರ್ಪಿಸಿದ ಹೂವನ್ನಿಟ್ಟು ಮಲಗುವುದರಿಂದ ಸುಖ ನಿದ್ರೆ ಬರುತ್ತದೆ.
*ಬೆಳ್ಳುಳ್ಳಿ ಅದೃಷ್ಟದ ಸಂಕೇತ. ಹಾಗಾಗಿ ಮಲಗುವ ವೇಳೆ ಜೇಬಿನಲ್ಲಿ ಅಥವಾ ದಿಂಬಿನ ಬಳಿ ಬೆಳ್ಳುಳ್ಳಿ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ