ಬೆಂಗಳೂರು : ಯಾವುದೇ ದೇವರನ್ನು ಪೂಜಿಸಿದರೂ, ಹೋಮ-ಹವನ, ಯಜ್ಞ- ಯಾಗ, ದಾನ-ಧರ್ಮ ಮಾಡಿದರೂ, ತೀರ್ಥ ಸ್ನಾನ, ಸಮುದ್ರ ಸ್ನಾನ ಮಾಡಿದರೂ ಬೇಗ ಫಲ ಸಿಗುವುದಿಲ್ಲ. ಆದರೆ ಕಲಿಯುಗದಲ್ಲಿ ವಿನಾಯಕ ಹಾಗು ದುರ್ಗೆಯನ್ನು ಪೂಜಿಸಿದರೆ ಬೇಗ ಫಲ ಸಿಗುತ್ತೆ ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ.
ವಿನಾಯಕನನ್ನು ವಿಘ್ನ ನಿವಾರಕ ಎಂದು ಹೇಳುತ್ತಾರೆ. ಆದರೆ ಎಷ್ಟೋ ಜನರಿಗೆ ತಿಳಿಯದ ಒಂದು ವಿಷಯವೆನೆಂದರೆ ಅವನೇ ವಿಘ್ನ ಕಾರಕನೂ ಕೂಡ ಎಂಬುದು. ಅಂದರೆ ವಿಘ್ನಗಳನ್ನು ಸೃಷ್ಟಿಸುವುದು ಅವನೆ. ಯಾವುದೆ ಒಂದು ಮಹತ್ತರವಾದ ಕಾರ್ಯ ಮಾಡಲು ಮೂಲ ಪುರುಷ ವಿನಾಯಕ ಎಂದು ಪೂಜೆಮಾಡುತ್ತೇವೆ. ಆವಾಗ ನಮಗೆ ತಿಳಿಯದ ಹಾಗೆ ಒಂದು ಪುಷ್ಪವನ್ನು ವಿನಾಯಕನಿಗೆ ಅರ್ಪಿಸುತ್ತೇವೆ. ಇದರಿಂದ ಆ ಕಾರ್ಯ ಅಪೂರ್ಣವಾಗುತ್ತದೆ.
ಆ ಪುಷ್ಪ ಯಾವುದೆಂದರೆ ತುಳಸಿ. ಹೌದು ವಿನಾಯಕನಿಗೆ ಯಾವುದೇ ಕಾರಣಕ್ಕೂ ತುಳಸಿಯನ್ನು ಇಟ್ಟು ಪೂಜೆ ಮಾಡಬಾರದು. ಅದು ಸರ್ವನಾಶಕ್ಕೆ ಕಾರಣವಾಗುತ್ತದೆ. ಇದನ್ನು ಪಾಲಿಸಿದರೆ ಖಂಡಿತ ನಿಮ್ಮ ಜೀವನದಲ್ಲಿ ಎಂದೂ ವಿಘ್ನಗಳು ಬರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ