ಬೆಂಗಳೂರು : ದೀಪಾವಳಿ ಹಬ್ಬದಂದು ಎಲ್ಲರ ಮನೆಯಲ್ಲೂ ದೀಪಗಳನ್ನು ಹಚ್ಚುತ್ತೇವೆ. ಆದರೆ ದೀಪಗಳನ್ನು ನಿಮಗಿಷ್ಟಬಂದಂತೆ ಹಚ್ಚುವ ಹಾಗೇ ಇಲ್ಲ. ಅದಕ್ಕೆ ಕೆಲವೊಂದು ನಿಯಮಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.
ದೀಪಾವಳಿ ಹಬ್ಬದಂದು ಮನೆಯೊಳಗೆ ಹಾಗೂ ಹೊರಗೆ ದೀಪಗಳನ್ನು ಹಚ್ಚುತ್ತೇವೆ. ಆದರೆ ಮನೆಯೊಳಗೆ ಹಚ್ಚಿದ ದೀಪವನ್ನು ನೀವು ಮಲಗುವ ತನಕ ಆರದಂತೆ, ಕೆಡದಂತೆ ನೋಡಿಕೊಳ್ಳಬೇಕು. ಹಾಗೇ ಒಡೆದ ಹಣತೆಗಳಲ್ಲಿ ದೀಪಗಳನ್ನು ಹಚ್ಚಬೇಡಿ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ.
ಹಾಗೇ ಅಲಂಕಾರಕ್ಕೆ ದೀಪಗಳನ್ನು ಹಚ್ಚುವಾಗ ನಿಮಗೆ ಇಷ್ಟಬಂದಷ್ಟು ದೀಪಗಳನ್ನು ಹಚ್ಚಬಾರದು. ನಿಮ್ಮ ಶಕ್ತಿಗನುಸಾರವಾಗಿ 12, 21, 28,48,54,78,108, 1008 ದೀಪಗಳನ್ನು ಮಾತ್ರ ಹಚ್ಚಬೇಕು.