ಬೆಂಗಳೂರು : ಶಿವ ಪೂಜೆ ಮಾಡುವಾಗ ಶ್ವೇತ ಬಣ್ಣದ ಪೂಜಾ ವಸ್ತುಗಳನ್ನು ಬಳಸಿದರೆ ಬೇಗ ಫಲ ಸಿಗುತ್ತದೆಯಂತೆ. ಆದಕಾರಣ ಶಿವಲಿಂಗದ ಪೂಜೆ ಮಾಡುವಾಗ ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆ, ಹೂವುಗಳನ್ನು ಬಳಸಲಾಗುತ್ತದೆ. ಶಿವನಿಗೆ ಶ್ವೇತ ಬಣ್ಣದ ಪೂಜಾ ವಸ್ತುಗಳಿಂದ ಪೂಜಿಸಲು ಒಂದು ಮುಖ್ಯ ಕಾರಣವಿದೆ.
ಅದೇನೆಂದರೆ ಶಿವನು ನಿರ್ಗುಣಕ್ಕೆ ಸಂಬಂಧಿಸಿದ ದೇವರು. ಆತ ಒಬ್ಬ ವೈರಾಗಿ. ಶ್ವೇತ ಬಣ್ಣ ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಅದ್ದರಿಂದ ಶಿವ ಪೂಜೆಗೆ ಶ್ವೇತ ಕಮಲ ಸೇರಿದಂತೆ ಬಿಳಿ ಬಣ್ಣದ ಬಹುತೇಕ ಎಲ್ಲಾ ಹೂವುಗಳನ್ನು, ಅಕ್ಷತೆಯನ್ನು ಬಳಸಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ